ನವದೆಹಲಿ: ಮಧ್ಯಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿಯ ಇಬ್ಬರು ಮಾಜಿ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. "ಹೆಚ್ಚಿನ ಸಮೀಕ್ಷೆಗಳು ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಅನುಕೂಲಕರ ವಾತಾವರಣ ಇದೆ ಎಂದು ಹೇಳಿವೆ. ಅದಕ್ಕಾಗಿಯೇ ಬಿಜೆಪಿ ಮತ್ತು ಜೆಡಿಎಸ್ನ ಉನ್ನತ ಮಟ್ಟದ ಬಹಳಷ್ಟು ನಾಯಕರು ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ನಾಯಕರು ನಮ್ಮ ಬಳಿಗೆ ಬರುತ್ತಿರುವ ಇತ್ತೀಚಿನ ಬೆಳವಣಿಗೆಯನ್ನು ನಾವು ಮಧ್ಯಪ್ರದೇಶದಲ್ಲೂ ನೋಡುತ್ತಿದ್ದೇವೆ" ಎಂದು ಮಧ್ಯಪ್ರದೇಶದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಸಿಪಿ ಮಿತ್ತಲ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಮತ್ತು ರಾಧೆಲಾಲ್ ಬಘೇಲ್ ಅವರು ಶನಿವಾರ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಕಮಲ್ ನಾಥ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬ್ರಾಹ್ಮಣ ಮತ್ತು ಒಬಿಸಿ ವರ್ಗಕ್ಕೆ ಸೇರಿದ ದೀಪಕ್ ಜೋಶಿ ಮತ್ತು ರಾಧೆಲಾಲ್ ಬಘೇಲ್ ಇಬ್ಬರನ್ನು ರಾಜ್ಯ ಬಿಜೆಪಿಯ ಕಡೆಗಣಿಸಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ನ್ನು ಬಲಪಡಿಸಲು ಪಕ್ಷಾಂತರಗೊಂಡಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಹೆಚ್ಚಿನ ಬಿಜೆಪಿ ನಾಯಕರು ನಮ್ಮೊಂದಿಗೆ ಸೇರುವ ನಿರೀಕ್ಷೆಯಿದೆ - ಮಿತ್ತಲ್:ಈ ವೇಳೆ ದೀಪಕ್ ಜೋಶಿ ತಮ್ಮ ದಿವಂಗತ ತಂದೆಯ ಭಾವಚಿತ್ರವನ್ನು ಕಮಲ್ ನಾಥ್ ಅವರಿಗೆ ನೀಡಿದರು ಮತ್ತು ರಾಜ್ಯದಲ್ಲಿ ಕೈಲಾಶ್ ಜೋಶಿ ಅವರ ಪ್ರಾಮಾಣಿಕ ರಾಜಕೀಯದ ಪರಂಪರೆಯನ್ನು ರಕ್ಷಿಸುವಂತೆ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥರಿಗೆ ಮನವಿ ಮಾಡಿದರು. "ಮುಂಬರುವ ದಿನಗಳಲ್ಲಿ ಹೆಚ್ಚಿನ ಬಿಜೆಪಿ ನಾಯಕರು ನಮ್ಮೊಂದಿಗೆ ಸೇರುವ ನಿರೀಕ್ಷೆಯಿದೆ. ನಾವು 2018 ರಲ್ಲಿ ಗೆದ್ದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ" ಎಂದು ಮಿತ್ತಲ್ ವಿಶ್ವಾಸ ವ್ಯಕ್ತಪಡಿಸಿದರು.