ಕರ್ನಾಟಕ

karnataka

ETV Bharat / bharat

ಭಾರತ - ಪಾಕಿಸ್ತಾನ ನಡುವಿನ ಮಧ್ಯಸ್ಥಿಕೆಗೆ ಯುಎಇ: ಕೇಂದ್ರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ - ಕೇಂದ್ರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್

ಭಾರತ ಮತ್ತು ಪಾಕಿಸ್ತಾನವನ್ನು ಮಾತುಕತೆಗೆ ಕರೆತರಲು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಪಾಕಿಸ್ತಾನ ಬಹಿರಂಗವಾಗಿ ಒಪ್ಪಿಕೊಂಡಿದೆ. ಆ ನಂತರ ಭಾರತದ ಆಂತರಿಕ ವಿಷಯದಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷವು ದೂರಿದೆ.

Congress slams Center on reports of mediation between India-Pakistan by UAE
ಕೇಂದ್ರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್

By

Published : Apr 19, 2021, 10:46 PM IST

Updated : Apr 19, 2021, 11:04 PM IST

ನವದೆಹಲಿ: ಭಾರತ ಮತ್ತು ಪಾಕಿಸ್ತಾನವನ್ನು ಮತ್ತೆ ಮಾತುಕತೆ ಕೋಷ್ಟಕಕ್ಕೆ ಕರೆತರಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಪಾಕಿಸ್ತಾನ ಸಾರ್ವಜನಿಕವಾಗಿ ಒಪ್ಪಿಕೊಂಡ ಹಿನ್ನೆಲೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಯುಎಇ ರಾಜತಾಂತ್ರಿಕರೊಬ್ಬರು ಭಾರತ ಮತ್ತು ಪಾಕಿಸ್ತಾನದ ನಡುವೆ ದಲ್ಲಾಳಿ ಸಂಪರ್ಕ ಹೊಂದಿದ್ದಾರೆಂದು ಹೇಳಿಕೊಳ್ಳುವ ವರದಿಗಳನ್ನು ನಾವು ಗಮನಿಸಿದ್ದೇವೆ. 1972 ರ ಸಿಮ್ಲಾ ಒಪ್ಪಂದ ಭಾರತೀಯ ರಾಜತಾಂತ್ರಿಕತೆಯ ಯಶಸ್ಸಿನಲ್ಲಿ ಒಂದಾಗಿದೆ. ವಿದೇಶಿ ಮಧ್ಯಸ್ಥಿಕೆಯನ್ನು ತಡೆಗಟ್ಟಲು ಹಾಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯವಾಗಿ ವ್ಯವಹರಿಸುವುದನ್ನು ಖಚಿತಪಡಿಸಿಕೊಳ್ಳಲು ಆ ಒಪ್ಪಂದ ಏರ್ಪಟ್ಟಿತ್ತು. ದುಃಖಕರ ವಿಷಯ ಎಂದರೆ, ಈ ಸರ್ಕಾರದ ಅಡಿ, ಭಾರತ-ಪಾಕಿಸ್ತಾನ ಸಮಸ್ಯೆಯನ್ನು ಪರಿಹರಿಸಲು ಇತರರು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ. ಹಾಗೆಯೇ ನಮ್ಮ ಆಂತರಿಕ ಸಮಸ್ಯೆಯಾದ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನೂ ಅಂತಾ ರಾಷ್ಟ್ರೀಕರಿಸಲಾಗಿದೆ ಎಂದು ಆರೋಪಿಸಿದರು.

ಕೇಂದ್ರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್

ಭಾರತ ಸರ್ಕಾರವು ಸಕಾರಾತ್ಮಕ ಕಾರಣವನ್ನು ಗಮನಿಸುತ್ತದೆ ಹಾಗೆ ಹಿಂದಿನ ನೀತಿಗಳಿಗೆ ಮರಳುತ್ತದೆ ಎಂದು ನಂಬಿದ್ದೇನೆ ಎಂದಿದ್ದಾರೆ. ಇನ್ನು ಇವರ ಹೇಳಿಕೆಗೆ ಪುಷ್ಟಿ ನೀಡುವಂತೆ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದ ಸಹವರ್ತಿ ಷಾ ಮಹಮೂದ್ ಖುರೇಷಿ ಅವರು ಯುಎಇಗೆ ಭೇಟಿ ನೀಡಿದ್ದು, ಕೆಲವು ಊಹಾಪೋಹಗಳನ್ನು ಹುಟ್ಟುಹಾಕಿತ್ತು.

Last Updated : Apr 19, 2021, 11:04 PM IST

ABOUT THE AUTHOR

...view details