ನವದೆಹಲಿ: ದೇಶದಲ್ಲಿ ರಸಗೊಬ್ಬರ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಪಕ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಈ ನಿರ್ಧಾರ ರೈತ ವಿರೋಧಿಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಡಿ-ಅಮೋನಿಯಂ ಫಾಸ್ಪೇಟ್(DAP) ಬೆಲೆಯಲ್ಲಿ ಶೇ. 63ರಷ್ಟು ಹೆಚ್ಚಿಗೆ ಮಾಡಿದ್ದರಿಂದ ಇದೀಗ 50 ಕೆಜಿ ಚೀಲದ ಬೆಲೆ 1900 ರೂ. ಆಗಿದೆ. ಈ ಹಿಂದೆ ಇದರ ಬೆಲೆ 1200ರೂ ಇತ್ತು. ಇದೇ ವಿಷಯವನ್ನಿಟ್ಟುಕೊಂಡು ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದು, ಇದರಿಂದ ರೈತ ಸಮುದಾಯಕ್ಕೆ 20,000 ಕೋಟಿ ಹೊರೆಯಾಗಲಿದೆ ಎಂದಿದೆ.
ಕೇಂದ್ರದ ವಿರುದ್ಧ ಸುರ್ಜೆವಾಲ್ ವಾಗ್ದಾಳಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರ ಭಾರತದ ಕೃಷಿ ಸಮುದಾಯ ಹಾಳು ಮಾಡಲು ನಿರ್ಧರಿಸಿದೆ. ಈ ಸರ್ಕಾರ ರೈತರ ವಿರೋಧಿಯಾಗಿದ್ದು, ದೇಶದ 62 ಕೋಟಿ ರೈತರು ಮತ್ತು ಕಾರ್ಮಿಕರನ್ನ ಗುಲಾಮರನ್ನಾಗಿ ಮಾಡಿದೆ ಎಂದರು.
ಕೃಷಿ ಜನಗಣತಿ ಪ್ರಕಾರ 14.64 ಕೋಟಿ ರೈತರು 15.78 ಕೋಟಿ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮಾಡ್ತಿದ್ದಾರೆ. ಆದರೆ, ಕಳೆದ 6.5 ವರ್ಷಗಳಲ್ಲಿ ಮೋದಿ ಸರ್ಕಾರ ತೆಗೆದುಕೊಂಡಿರುವ ವಿವಿಧ ನಿರ್ಧಾರಗಳಿಂದ ರೈತರ ಮೇಲೆ ಹೆಚ್ಚುವರಿ ಹೊರೆಯಾಗಿದೆ ಎಂದರು.
ಇದನ್ನೂ ಓದಿ: ಲಾಕ್ಡೌನ್ ನಿಯಮ ಉಲ್ಲಂಘನೆ: ಮುಖಕ್ಕೆ ಆರತಿ ಎತ್ತಿ ಬುದ್ಧಿ ಹೇಳಿದ ಪೊಲೀಸರು
ಕೇಂದ್ರ ಸರ್ಕಾರದಿಂಧ ಕೃಷಿ ವಿರೋಧಿ ಕಾನೂನು, ತೈಲ ಬೆಲೆಯಲ್ಲಿ ಏರಿಕೆ, ಕೃಷಿ ಮೇಲಿನ ತೆರಿಗೆ, ರೈತರ ಸಾಲ ಮನ್ನಾ ಭರವಸೆ ಹಾಗೂ ಬೆಳೆ ವಿಮಾ ಯೋಜನೆಯಲ್ಲಿ ಲೂಟಿ, ರಸಗೊಬ್ಬರ ಬೆಲೆ ಏರಿಕೆಯಂತಹ ನಿರ್ಧಾರಗಳಿಂದ ರೈತರ ವಿರೋಧಿ ಸರ್ಕಾರ ಎಂದು ಸಾಬೀತು ಪಡಿಸಿದೆ ಎಂದರು.
ಒಂದಿ ತಿಂಗಳ ಹಿಂದೆ ಬೆಲೆ ಏರಿಕೆಯಾಗ್ತಿದ್ದ ವೇಳೆ ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂದು ಬಿಜೆಪಿ ಹೇಳಿತ್ತು. ಆದರೆ, ಇದೀಗ ಹಿಂಬಾಗಿಲಿನಿಂದ ದರ ಹೆಚ್ಚಿಸುತ್ತಿದೆ ಎಂದಿದ್ದಾರೆ. ಈ ನಿರ್ಧಾರವನ್ನ ತಕ್ಷಣವೇ ಹಿಂಪಡೆದುಕೊಂಡು ರೈತರ ಲೂಟಿ ಮಾಡುವುದನ್ನ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರವನ್ನ ಸುರ್ಜೆವಾಲ್ ಒತ್ತಾಯಿಸಿದ್ದಾರೆ.