ಕರ್ನಾಟಕ

karnataka

ETV Bharat / bharat

ರಾಮ ಮಂದಿರಕ್ಕೆ ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ : ಸೂಕ್ತ ತನಿಖೆಗೆ ಕಾಂಗ್ರೆಸ್ ಆಗ್ರಹ

ಮಾರ್ಚ್ 18ರಂದು ಇಬ್ಬರು ರಿಯಲ್ ಎಸ್ಟೇಟ್ ಖರೀದಿದಾರರು ಅಯೋಧ್ಯೆಯ ಬಾಗ್ ಬೈಸೈ ಗ್ರಾಮದ ಸದರ್ ತಹಸಿಲ್‌ನಲ್ಲಿರುವ 1.208 ಹೆಕ್ಟೇರ್ ಭೂಮಿಯನ್ನು 2 ಕೋಟಿ ರೂಪಾಯಿಗೆ ಖರೀದಿಸಿದ್ದರು ಎಂದು ಪವನ್ ಪಾಂಡೆ ಆರೋಪಿಸಿದ್ದಾರೆ. ಈ ಜಮೀನು ರಿಯಲ್ ಎಸ್ಟೇಟ್‌ನವರು ಖರೀದಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಭೂಮಿಯನ್ನು ಶ್ರೀರಾಮ್ ಜನ್ಮ ಭೂಮಿ ತೀರ್ಥ್‌ಕ್ಷೇತ್ರ 18.5 ಕೋಟಿ ರೂಪಾಯಿಗೆ ಖರೀದಿಸಿರುವುದಾಗಿ ವಿವರಿಸಿದೆ..

By

Published : Jun 14, 2021, 8:29 PM IST

ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ
ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ

ನವದೆಹಲಿ :ರಾಮಮಂದಿರ ನಿರ್ಮಾಣಕ್ಕಾಗಿ ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನಡೆಸುವಂತೆ ಕೋರಿ ಕಾಂಗ್ರೆಸ್​ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ವಕ್ತಾರ ರಂದೀಪ್​​ ಸಿಂಗ್ ಸುರ್ಜೇವಾಲಾ, ಜಮೀನು ಖರೀದಿಯ ಭ್ರಷ್ಟಾಚಾರದಲ್ಲಿ ಬಿಜೆಪಿ ಮತ್ತು ಆರ್​ಎಸ್​ಎಸ್‌ನವರು ತೊಡಗಿದ್ದಾರೆ. ಇದು ರಾಜಕೀಯ ವಿಷಯವಲ್ಲ. ಹಾಗಾಗಿ, ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ದೇವಾಲಯ ನಿರ್ಮಾಣಕ್ಕಾಗಿ ದೇಣಿಗೆ ಹಣ ಮತ್ತು ಖರ್ಚಿನ ಲೆಕ್ಕ ಮತ್ತು ಆ ದೇಣಿಗೆಗಳಿಂದ ಖರೀದಿಸಿದ ಭೂಮಿಯ ಮೌಲ್ಯದ ಬಗ್ಗೆ ನ್ಯಾಯಾಲಯ ಪರಿಶೀಲಿಸಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಕೋಟ್ಯಂತರ ಜನರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದಾಗಿ ನೀಡಿದ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು ಅನ್ಯಾಯ. ಇದು ಜನರ ನಂಬಿಕೆಗೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚಂಪತ್ ರಾಯ್​, ಸುಪ್ರೀಂಕೋರ್ಟ್​ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಭೂಮಿ ಖರೀದಿಗೆ ಹೆಚ್ಚಿನ ಜನ ಬರಲಾರಂಭಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗಾಗಿ ಯುಪಿ ಸರ್ಕಾರವು ಸಾಕಷ್ಟು ಭೂಮಿ ಖರೀದಿಸುತ್ತಿರುವುದರಿಂದ ಭೂಮಿಯ ಬೆಲೆ ಹೆಚ್ಚಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಿನ್ನೆಯಷ್ಟೇ ಉತ್ತರಪ್ರದೇಶದ ವಿಪಕ್ಷಳಗಾದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ), ರಾಮಮಂದಿರಕ್ಕಾಗಿ ರಾಮಮಂದಿರ ಟ್ರಸ್ಟ್ ಅಧಿಕ ಬೆಲೆಗೆ ಭೂಮಿಯನ್ನು ಖರೀದಿಸಿದೆ ಎಂದು ಆರೋಪಿಸಿದ್ದವು. 2 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು 18.5 ಕೋಟಿ ರೂಪಾಯಿಗೆ ಖರೀದಿಸಲಾಗಿದ್ದು, ಇದು ಅಕ್ರಮ ಹಣ ವರ್ಗಾವಣೆ ಪ್ರಕರಣವಾಗಿದೆ ಎಂದು ದೂರಿದ್ದವು. ಅಲ್ಲದೇ ಈ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕೆಂದು ಸಮಾಜವಾದಿ ಪಕ್ಷದ ಮಾಜಿ ಸಚಿವ ಪವನ್ ಪಾಂಡೆ ಮತ್ತು ಆಪ್‌ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಶ್ರೀರಾಮ ಮಂದಿರ ಟ್ರಸ್ಟ್ ವಿರುದ್ಧ ಭೂ ಹಗರಣ ಆರೋಪ: ವಿಪಕ್ಷಗಳಿಂದ ತನಿಖೆಗೆ ಆಗ್ರಹ

ಮಾರ್ಚ್ 18ರಂದು ಇಬ್ಬರು ರಿಯಲ್ ಎಸ್ಟೇಟ್ ಖರೀದಿದಾರರು ಅಯೋಧ್ಯೆಯ ಬಾಗ್ ಬೈಸೈ ಗ್ರಾಮದ ಸದರ್ ತಹಸಿಲ್‌ನಲ್ಲಿರುವ 1.208 ಹೆಕ್ಟೇರ್ ಭೂಮಿಯನ್ನು 2 ಕೋಟಿ ರೂಪಾಯಿಗೆ ಖರೀದಿಸಿದ್ದರು ಎಂದು ಪವನ್ ಪಾಂಡೆ ಆರೋಪಿಸಿದ್ದಾರೆ. ಈ ಜಮೀನು ರಿಯಲ್ ಎಸ್ಟೇಟ್‌ನವರು ಖರೀದಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಭೂಮಿಯನ್ನು ಶ್ರೀರಾಮ್ ಜನ್ಮ ಭೂಮಿ ತೀರ್ಥ್‌ಕ್ಷೇತ್ರ 18.5 ಕೋಟಿ ರೂಪಾಯಿಗೆ ಖರೀದಿಸಿರುವುದಾಗಿ ವಿವರಿಸಿದೆ.

ABOUT THE AUTHOR

...view details