ಕರ್ನಾಟಕ

karnataka

ETV Bharat / bharat

ಗೊಂದಲದ ನಡುವೆಯೂ ಹರಿಯಾಣದ ಕುರುಕ್ಷೇತ್ರದಲ್ಲಿ ಕಾಂಗ್ರೆಸ್ ಎರಡನೇ ಕಾರ್ಯಕ್ರಮ! - Congress News

ಜಮ್ಮುವಿನಲ್ಲಿ ನಡೆದ ಉದ್ವಿಘ್ನತೆ ನಡುವೆಯೂ ಹರಿಯಾಣದ ಕುರುಕ್ಷೇತ್ರದಲ್ಲಿ ಕಾಂಗ್ರೆಸ್ ಎರಡನೇ ಕಾರ್ಯಕ್ರಮ ನಡೆಸಲು ಮುಂದಾಗಿದೆ.

Congress
ಕಾಂಗ್ರೆಸ್

By

Published : Mar 2, 2021, 7:42 AM IST

ನವದೆಹಲಿ: ಹರಿಯಾಣದ ಕುರುಕ್ಷೇತ್ರದಲ್ಲಿ ಕಾಂಗ್ರೆಸ್ ಎರಡನೇ ಕಾರ್ಯಕ್ರಮ ನಡೆಸಲು ಮುಂದಾಗಿದೆ. ಆದರೆ ಗಾಂಧಿ ಕುಟುಂಬದ ವಿರುದ್ಧವೇ ತಿರುಗು ಬಿದ್ದ ಆನಂದ್ ಶರ್ಮಾ, ಶಶಿ ತರೂರ್, ಕಪಿಲ್ ಸಿಬಲ್ ಸೇರಿದಂತೆ ಕಾಂಗ್ರೆಸ್ ನಿಷ್ಠಾವಂತ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ಕಾಣುತ್ತಿಲ್ಲ.

ಕಾಂಗ್ರೆಸ್​ನ ಪ್ರಮುಖ ನಾಯಕರ G-23 ಒಕ್ಕೂಟವು ಜಮ್ಮು ಕಾಶ್ಮೀರದಲ್ಲಿ ಶಾಂತಿ ಸಮ್ಮೇಳನ ನಡೆಸಿತ್ತು. ಇದರಲ್ಲಿ ಪಕ್ಷ ಬಲವರ್ಧನೆ ಸಂಬಂಧ ತೀರ್ಮಾನಗಳನ್ನು ಕೈಗೊಳ್ಳಲಾಗಿತ್ತು. ಇತ್ತೀಚೆಗೆ ರಾಜ್ಯಸಭೆಯಿಂದ ನಿವೃತ್ತಿ ಹೊಂದಿದ, ರಾಜ್ಯಸಭಾ ಸದಸ್ಯ ಗುಲಾಮ್ ನಬಿ ಆಜಾದ್​ಗೆ ಮತ್ತೊಂದು ಅವಧಿಯ ಸದಸ್ಯತ್ವ ನೀಡಲು ಕಾಂಗ್ರೆಸ್ ನಿರಾಸಕ್ತಿ ತೋರಿತ್ತು. ಕಾಂಗ್ರೆಸ್​ನ ಇಂತಹ ನಿರ್ಧಾರಗಳ ಬಗ್ಗೆ G23 ಅಸಮಾಧಾನ ತೋರಿತ್ತು. ಕಾಂಗ್ರೆಸ್ ಕಳೆಗುಂದುತ್ತಿದ್ದು, ಪಕ್ಷ ಬಲಪಡಿಸುವುದು ಈಗ ಅನಿವಾರ್ಯ ಎಂದು G23 ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಆದರೆ, ಈ ವೇಳೆ ಗಾಂಧಿ ಕುಟುಂಬದ ಮೇಲೆಯೇ ಆಕ್ರೋಶ ಹೊರ ಹಾಕಿದ ಹಿರಿಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಮನಸ್ಥಿತಿಯಲ್ಲಿ ಉನ್ನತ ನಾಯಕತ್ವ ಇಲ್ಲ ಮತ್ತು ಅವರ ಟೀಕೆಗಳಿಗೆ ಅವರಿಂದ ವಿವರಣೆಯನ್ನು ಕೋರಿಲ್ಲ ಎಂದು ಮೂಲಗಳು ತಿಳಿಸಿದೆ.

"ಕುರುಕ್ಷೇತ್ರ ಜಿಲ್ಲೆಯಲ್ಲಿ ರ‍್ಯಾಲಿಯ ಯೋಜನೆ ನಡೆಯುತ್ತಿದೆ. ಇದು ಯಾವ ಬ್ಯಾನರ್ ಅಡಿ ನಡೆಯಲಿದೆ ಎಂದು ಇನ್ನೂ ಅಂತಿಮಗೊಳಿಸಲಾಗಿಲ್ಲವಾದರೂ, ಜಿ -23 ನಾಯಕರಾದ ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ರಾಜ್ ಬಬ್ಬರ್, ಭೂಪಿಂದರ್ ಸಿಂಗ್ ಹೂಡಾ ಮುಂತಾದ ನಾಯಕರು ಜಮ್ಮುವಿನಲ್ಲಿ ನಡೆದ ಉದ್ವಿಗ್ನತೆ ಸಹಜಗೊಳಿಸುವ ಮನಸ್ಥಿತಿಯಲ್ಲಿಲ್ಲ" ಎಂದು ತಿಳಿದು ಬಂದಿದೆ.

ABOUT THE AUTHOR

...view details