ಕರ್ನಾಟಕ

karnataka

ETV Bharat / bharat

ಬಿಜೆಪಿಗೆ ಸೇರುವ ವದಂತಿ: ಗೋವಾ ಪ್ರತಿಪಕ್ಷದ ನಾಯಕನ ವಜಾಗೊಳಿಸಿದ ಕಾಂಗ್ರೆಸ್​ - ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರಲು ಮುಂದಾಗಿದ್ಧಾರೆ

ಗೋವಾದಲ್ಲಿ ಜುಲೈ 12ರಂದು ಮಳೆಗಾಲದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಪ್ರತಿಪಕ್ಷದ ನಾಯಕನ ಸ್ಥಾನದಿಂದ ಮೈಕೆಲ್ ಲೋಬೋ ಅವರನ್ನು ಕಾಂಗ್ರೆಸ್ ತೆಗೆದುಹಾಕಿದೆ.

congress-removes-goa-mla-michael-lobo-as-leader-of-opposition
ಬಿಜೆಪಿಗೆ ಹಾರುವ ವದಂತಿ: ಗೋವಾ ವಿರೋಧ ಪಕ್ಷದ ನಾಯಕನ ವಜಾಗೊಳಿಸಿದ ಕಾಂಗ್ರೆಸ್​

By

Published : Jul 10, 2022, 10:56 PM IST

ಪಣಜಿ (ಗೋವಾ): ಗೋವಾ ರಾಜಕೀಯದಲ್ಲಿ ದಿಢೀರ್​ ಬೆಳವಣಿಗೆ ಕಂಡುಬಂದಿದೆ. ಪ್ರತಿಪಕ್ಷದ ನಾಯಕನ ಸ್ಥಾನದಿಂದ ಕಾಂಗ್ರೆಸ್​​ ತನ್ನ ಶಾಸಕ ಮೈಕೆಲ್ ಲೋಬೋ ಅವರನ್ನು ವಜಾ ಮಾಡಿದೆ. ಮೈಕೆಲ್ ಲೋಬೋ​ ಪಕ್ಷದಲ್ಲೇ ಇದ್ದುಕೊಂಡು ಬಿಜೆಪಿ ಜೊತೆಗೆ ಕೈ ಜೋಡಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಗೋವಾದಲ್ಲಿ ಕೆಲ ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರಲು ಮುಂದಾಗಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಇದರ ನಡುವೆ ಕಾಂಗ್ರೆಸ್ ನಾಯಕರು ಭಾನುವಾರ ಪ್ರತಿಪಕ್ಷದ ನಾಯಕರಾದ ಮೈಕೆಲ್ ಲೋಬೋ ಅವರೇ ಪಕ್ಷಾಂತರಕ್ಕೆ ಸಂಚು ರೂಪಿಸಿದ್ದಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ಗೋವಾದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗಲು ಮತ್ತು ಶಾಸಕರ ಪಕ್ಷಾಂತರಕ್ಕೆ ಬಿಜೆಪಿಯೊಂದಿಗೆ ನಮ್ಮದೇ ಕೆಲವು ನಾಯಕರು ಸಂಚು ರೂಪಿಸಿದ್ದಾರೆ. ಈ ಪಿತೂರಿಯ ನೇತೃತ್ವವನ್ನು ನಮ್ಮದೇ ಇಬ್ಬರು ನಾಯಕರಾದ ಪ್ರತಿಪಕ್ಷದ ನಾಯಕರಾದ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ವಹಿಸಿದ್ದಾರೆ. ಈ ಇಬ್ಬರೂ ಬಿಜೆಪಿಯೊಂದಿಗೆ ಸಂಪೂರ್ಣ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ದಿಗಂಬರ ಕಾಮತ್ ವಿರುದ್ಧ ಅನೇಕ ಕೇಸ್​ಗಳು ಇವೆ. ಹೀಗಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಇಂಹತ ಕೆಲಸಕ್ಕೆ ಕೈ ಹಾಕಿದ್ದಾರೆ. ಇತ್ತ, ಮೈಕೆಲ್ ಲೋಬೋ ಅಧಿಕಾರದ ಆಸೆಯಿಂದ ಪಕ್ಷಕ್ಕೆ ಮೋಸ ಮಾಡಲು ಮುಂದಾಗಿದ್ದಾರೆ. ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿಯು ಪ್ರತಿಪಕ್ಷವನ್ನು ಮುಗಿಸಲು ಬಯಸುತ್ತಿದೆ ಎಂದು ಆರೋಪಿಸಿದರು.

ಇತ್ತ, ಶಾಸಕರ ಪಕ್ಷಾಂತರ ವದಂತಿಗಳ ಮಧ್ಯೆಯೇ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಉಪಸ್ಪೀಕರ್ ಹುದ್ದೆ ನಡೆಯಬೇಕಿದ್ದ ಚುನಾವಣೆಯ ಅಧಿಸೂಚನೆಯನ್ನು ಭಾನುವಾರ ಬೆಳಗ್ಗೆ ಹಿಂಪಡೆದಿದ್ದಾರೆ. ಜುಲೈ 12ರಿಂದ ಮಳೆಗಾಲದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ.

ಇದನ್ನೂ ಓದಿ:ಆ್ಯಂಬುಲೆನ್ಸ್​​ಗೆ ಹಣವಿಲ್ಲದೆ ಪರದಾಡಿದ ತಂದೆ..​ ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಕುಳಿತ 8ರ ಬಾಲಕ

ABOUT THE AUTHOR

...view details