ಹೈದರಾಬಾದ್: ಅಸ್ಸಾಂ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಲ್ಲಿನ 40 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲು ಅಭ್ಯರ್ಥಿಗಳನ್ನು ಶನಿವಾರ ಘೋಷಿಸಿದೆ.
ಬಿಡುಗಡೆಯಾದ ಪಟ್ಟಿಯಲ್ಲಿನ ಮಾಹಿತಿಯಂತೆ, ಪಕ್ಷದ ರಾಜ್ಯಾಧ್ಯಕ್ಷ ತಿಪುನ್ ಬೊರಾ ಗೋಹ್ಪುರದಿಂದ, ಜೊರ್ಹಾತ್ನಲ್ಲಿ ರಾಣಾ ಗೋಸ್ವಾಮಿ, ಸಿಬ್ಸಾಗರ್ನಲ್ಲಿ ಸುಭ್ರಮಿತ್ರ, ದಿಬ್ರೂಗಢದಿಂದ ರಾಜ್ಕುಮಾರ್ ನೀಲನೇತ್ರ ಮತ್ತು ದಿಗ್ಭಾಯ್ನಿಂದ ಸಿಬ್ನಾಟ್ ಚೇಟಿಯಾ ಸ್ಪರ್ಧೆ ನಡೆಸಲಿದ್ದಾರೆ.
ಇದನ್ನೂ ಓದಿ:'ರಾಮಮಂದಿರಕ್ಕೆ ಸಂಗ್ರವಾಗುವ ನಿಧಿ ಎರಡೂವರೆ ಸಾವಿರ ಕೋಟಿ ಮೀರಬಹುದು'
ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಬಾರಿ ಚುನಾವಣೆಯ ಜವಾಬ್ದಾರಿ ಹೊತ್ತಿದ್ದಾರೆ. ಮಾರ್ಚ್ 1ರಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಅಸ್ಸಾಂನಲ್ಲಿ 2001ರಿಂದ 2016ರವೆಗೆ ಕಾಂಗ್ರೆಸ್ ಆಡಳಿತ ನಡೆಸಿದ್ದು, 2016ರಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ಕೆಲವೊಂದು ಪಕ್ಷಗಳು ಮಹಾಘಟಬಂಧನ್ ರೂಪಿಸಿವೆ. ಇವುಗಳನ್ನು ಹೊರತುಪಡಿಸಿದರೆ ಅಸ್ಸಾಂನಲ್ಲಿ ಎಐಯುಡಿಎಫ್, ಅಂಚಲಿಕ್ ಗಣ ಮೋರ್ಚಾ,ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಮುಂತಾದ ಸ್ಥಳೀಯ ಪಕ್ಷಗಳೂ ಇದ್ದು, ಅಲ್ಲಿನ ಸ್ಥಳೀಯರ ಮತಗಳ ಕಡೆಗೆ ಗಮನ ಹರಿಸುತ್ತವೆ.