ಕರ್ನಾಟಕ

karnataka

ETV Bharat / bharat

ಪಂಜಾಬ್​ ವಿಧಾನಸಭೆ ಫೈಟ್​​: 'ಕೈ' ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​, ಅಮೃತಸರ್​​ದಿಂದ ಸಿಧು ಸ್ಪರ್ಧೆ - ಪಂಜಾಬ್ ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ

Punjab Congress candidate list-2022: ಉತ್ತರ ಪ್ರದೇಶ ಬೆನ್ನಲ್ಲೇ ಪಂಜಾಬ್​​​ ವಿಧಾನಸಭೆ ಚುನಾವಣಾ ಕ್ಷೇತ್ರಕ್ಕೂ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದೆ. 117 ಕ್ಷೇತ್ರಗಳ ಪೈಕಿ 86 ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ.

Punjab Congress candidate list 2022
Punjab Congress candidate list 2022

By

Published : Jan 15, 2022, 3:52 PM IST

ಚಂಡೀಗಢ(ಪಂಜಾಬ್​):ಪಂಜಾಬ್​ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​​​ನಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ​​ ಆಗಿದೆ. ಮುಖ್ಯಮಂತ್ರಿ ಚರಣ್​ಜಿತ್​ ಸಿಂಗ್​ ಚನ್ನಿ, ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಸೇರಿದಂತೆ 86 ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿದೆ.

ಪಟ್ಟಿಯಲ್ಲಿ ಮುಖ್ಯಮಂತ್ರಿ ಚರಣ್​ಜಿತ್​​ ಸಿಂಗ್​ ಚನ್ನಿ ಚಮ್ಕೌರ್​​ ಸಾಹಿಬ್​​ ಎಸ್​​ಸಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ನವಜೋತ್​ ಸಿಂಗ್​ ಸಿಧು ಅಮೃತಸರ್​ದ ಪೂರ್ವ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಪಂಜಾಬ್​​ ವಿಧಾನಸಭೆಯ ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಕಣದಲ್ಲಿ ಕಾಂಗ್ರೆಸ್​, ಬಿಜೆಪಿ, ಆಮ್​ ಆದ್ಮಿ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಅವರ ಪಂಜಾಬ್ ಲೋಕ್​ ಕಾಂಗ್ರೆಸ್​ ಕೂಡ ಇದೆ.

ಇದನ್ನೂ ಓದಿರಿ:ನಟ ಸೋನು ಸೂದ್​ ಸಹೋದರಿ ಕಾಂಗ್ರೆಸ್​ ಸೇರ್ಪಡೆ.. ಪಂಜಾಬ್​ ಚುನಾವಣೆಗೆ ಸ್ಪರ್ಧೆ!

ಕಾಂಗ್ರೆಸ್ ಪಟ್ಟಿಯಲ್ಲಿ ಡೆಪ್ಯುಟಿ ಸಿಎಂ ಸುಖಜಿಂದರ್ ಸಿಂಗ್​ ಡೇರಾ- ಬಾಬಾ ನಾನಕ್​ ಕ್ಷೇತ್ರದಿಂದ ಹಾಗೂ ರಾಜ್ಯ ಸಾರಿಗೆ ಸಚಿವ ಅಮರೀಂದರ್​ ವಾರಿಂಗ್​- ಗಿಡ್ದರ್​ಬಾಹಾ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರಿರುವ ನಟ ಸೋನು ಸೂದ್​​ ಅವರ ಸಹೋದರಿ ಮಾಳವಿಕಾ ಸೂದ್​ಗೂ ಟಿಕೆಟ್​ ಖಚಿತಗೊಂಡಿದ್ದು, ಅವರು ಮೋಗಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಸಹೋದರಿ ಪರವಾಗಿ ತಾವು ಮತಯಾಚನೆ ಮಾಡುವುದಾಗಿ ಈಗಾಗಲೇ ನಟ ಸೋನು ಸೂದ್ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಜೊತೆ ನವಜೋತ್ ಸಿಂಗ್ ಸಿಧು

ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಶಾಕ್​

ಪಂಜಾಬ್​ನ ಕಾಂಗ್ರೆಸ್​ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಜೋಗಿಂದರ್​ ಸಿಂಗ್ ಮಾನ್​ ಇಂದು ಕಾಂಗ್ರೆಸ್​ನಿಂದ ಹೊರಬಂದಿದ್ದಾರೆ. ಪರಿಶಿಷ್ಟ ಜಾತಿಯ ಪ್ರಬಲ ನಾಯಕರಾಗಿದ್ದ ಇವರು, ಪಕ್ಷದೊಂದಿಗೆ 50 ವರ್ಷಗಳ ಕಾಲ ಇದ್ದರು. ಆದರೆ ಇಂದು ದಿಢೀರ್​ ಆಗಿ ಹೊರಬಂದಿದ್ದಾರೆ. ಪಂಜಾಬ್​​ನಲ್ಲಿ ಫೆಬ್ರವರಿ 14ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್​​ 10ರಂದು ಮತ ಎಣಿಕೆ ನಡೆಯಲಿದೆ.

ABOUT THE AUTHOR

...view details