ಕರ್ನಾಟಕ

karnataka

ETV Bharat / bharat

ಪಕ್ಷ ಬಿಡುವವರು ಬಿಡಬಹುದು..'ನಿರ್ಭೀತ' ನಾಯಕರು ನಮ್ಮ ಪಕ್ಷಕ್ಕೆ ಬರಬಹುದು: ರಾಹುಲ್ ಗಾಂಧಿ ಆಫರ್​ - ಆರ್‌ಎಸ್‌ಎಸ್

ಕಾಂಗ್ರೆಸ್​ ಪಕ್ಷಕ್ಕೆ ನಿರ್ಭೀತ ಜನರ ಅಗತ್ಯವಿದೆ. ಹೀಗಾಗಿ ಪಕ್ಷದಲ್ಲಿರುವ ಆರ್‌ಎಸ್‌ಎಸ್​ ನವರು ಪಕ್ಷ ತೊರೆದು ಹೋಗಬಹುದು, ನಿರ್ಭೀತ ನಾಯಕರು ನಮ್ಮ ಪಕ್ಷ ಸೇರಬಹುದು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕರೆ ಕೊಟ್ಟಿದ್ದಾರೆ.

people
ರಾಹುಲ್ ಗಾಂಧಿ

By

Published : Jul 17, 2021, 1:31 PM IST

ನವದೆಹಲಿ​:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ನಿರ್ಭೀತ ಜನರ ಅಗತ್ಯವಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಪಕ್ಷದಲ್ಲಿರುವ ಸರ್ಕಾರದ ವಿರುದ್ಧ ಮಾತನಾಡಲು ಹಿಂಜರಿಯುವ ನಾಯಕರನ್ನು ಪಕ್ಷ ಬಿಟ್ಟು ಹೊರ ಹೋಗುವಂತೆ ಕೇಳಿ ಕೊಂಡಿದ್ದಾರೆ.

ರಾಹುಲ್ ಗಾಂಧಿ

ಬಿಜೆಪಿ ಮತ್ತು ವಾಸ್ತವ ಎದುರಿಸಲು ಹೆದರುವವರು ಪಕ್ಷವನ್ನು ಬಿಡಲು ಸ್ವತಂತ್ರರು. ಹಾಗೆ ಹೊರಗಿನ ನಿರ್ಭೀತ ನಾಯಕರು ಪಕ್ಷವನ್ನು ಸೇರಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದಲ್ಲಿ ಕೆಲ ಆರ್‌ಎಸ್‌ಎಸ್ ನವರಿದ್ದು ಅವರೆಲ್ಲಾ ಪಕ್ಷ ಬಿಟ್ಟು ಹೋಗಬೇಕು. ನಮಗೆ ಅವರು ಬೇಡ, ನಮಗೆ ಅವರ ಅಗತ್ಯವಿಲ್ಲ. ನಮಗೆ ನಿರ್ಭೀತ ಜನರು ಬೇಕು. ಇದು ನಮ್ಮ ಸಿದ್ಧಾಂತ. ಇದು ನಿಮಗೆ ನನ್ನ ಮೂಲ ಸಂದೇಶ ಎಂದು ಆನ್​​ಲೈನ್​ ಸಂವಾದದಲ್ಲಿ ತಮ್ಮ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ತಂಡಕ್ಕೆ ತಿಳಿಸಿದ್ದಾರೆ.

ಸದ್ಯ ರಾಹುಲ್​ ಗಾಂಧಿ ಹೇಳಿಕೆ ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ಸೇರಲು ಪಕ್ಷ ತೊರೆದಿದ್ದರ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಅವರಲ್ಲಿ ಸಿಂಧಿಯಾ ಮತ್ತು ಜಿತಿನ್ ಪ್ರಸಾದ ಸೇರಿದ್ದಾರೆ. ಇನ್ನು ನಟಿ ಖುಷ್ಬೂ ಸುಂದರ್ ಅವರಲ್ಲದೇ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರಾದ ನಾರಾಯಣ್ ರಾಣೆ ಮತ್ತು ರಾಧಾಕೃಷ್ಣ ವಿಖ್ ಪಾಟೀಲ್ ಕೂಡ ಕಾಂಗ್ರೆಸ್​ ಪಕ್ಷವನ್ನು ತ್ಯಜಿಸಿದ್ದರು.

ABOUT THE AUTHOR

...view details