ಕರ್ನಾಟಕ

karnataka

ETV Bharat / bharat

"ಪ್ರಧಾನಿ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಅದಾನಿ ಗ್ರೂಪ್ ನಡುವೆ ‘ರಹಸ್ಯ ಒಪ್ಪಂದ’.!?" - Congress national spokesperson Randeep Singh Surjewala on Kerala electricity

ಇತರ 'ನವೀಕರಿಸಬಹುದಾದ ಇಂಧನ ಮೂಲ'ದಿಂದ ಅಂದರೆ ಸೌರಶಕ್ತಿಯಿಂದ ವಿದ್ಯುತ್ ಅನ್ನು ಪ್ರತಿ ಯೂನಿಟ್​ಗೆ 1.99 ರೂ. ದರದಲ್ಲಿ (ನವೆಂಬರ್/ಡಿಸೆಂಬರ್) ಖರೀದಿಸಬಹುದಂತೆ. ಹೀಗಾದಲ್ಲಿ ಎಲ್​ಡಿಎಫ್​ ಸರ್ಕಾರವು ಗಾಳಿ ಶಕ್ತಿಯನ್ನು ಅದಾನಿ ಸಮೂಹದಿಂದ ಸುಮಾರು 8,785 ಕೋಟಿ ರೂ.ಗೆ 300 ಮೆಗಾವ್ಯಾಟ್ ದೀರ್ಘಾವಧಿಯ ಪವನ ಶಕ್ತಿಯನ್ನು 25 ವರ್ಷಗಳವರೆಗೆ ಖರೀದಿಸಲು ನಿರ್ಧರಿಸಿದ್ದೇಕೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್​ ಸಿಂಗ್​ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್​ ಸಿಂಗ್​ ಸುರ್ಜೆವಾಲಾ
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್​ ಸಿಂಗ್​ ಸುರ್ಜೆವಾಲಾ

By

Published : Mar 30, 2021, 6:39 AM IST

ತಿರುವನಂತಪುರಂ (ಕೇರಳ):ಪ್ರಧಾನಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅದಾನಿ ಗ್ರೂಪ್ ನಡುವೆ "ರಹಸ್ಯ ಒಪ್ಪಂದ" ಇದೆಯೇ ಎಂದು ಕಾಂಗ್ರೆಸ್​ ಅನುಮಾನ ವ್ಯಕ್ತಪಡಿಸಿದೆ.

ಕೇರಳವು ಪ್ರಾಮಾಣಿಕತೆಯನ್ನು ಗೌರವಿಸುತ್ತದೆ. ರಹಸ್ಯ ವ್ಯವಹಾರಗಳನ್ನು ಕಂಡರೆ ಅಸಹ್ಯವೆನಿಸುತ್ತದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಯಸುತ್ತದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್​ ಸಿಂಗ್​ ಸುರ್ಜೆವಾಲಾ ಹೇಳಿದ್ದಾರೆ.

ಇದನ್ನೂ ಓದಿ:ಸಿಖ್​ರ 'ಹೊಲಾ ಮೊಹಲ್ಲಾ' ಆಚರಣೆ ವೇಳೆ ಘರ್ಷಣೆ: ನಾಲ್ವರು ಪೊಲೀಸರಿಗೆ ಗಾಯ

ಇತರ 'ನವೀಕರಿಸಬಹುದಾದ ಇಂಧನ ಮೂಲ'ದಿಂದ ಅಂದರೆ ಸೌರಶಕ್ತಿಯಿಂದ ವಿದ್ಯುತ್ ಅನ್ನು ಪ್ರತಿ ಯೂನಿಟ್​ಗೆ 1.99 ರೂ. ದರದಲ್ಲಿ (ನವೆಂಬರ್/ಡಿಸೆಂಬರ್) ಖರೀದಿಸಬಹುದು ಎಂದಾದಲ್ಲಿ ಎಲ್​ಡಿಎಫ್​ ಸರ್ಕಾರವು ಗಾಳಿ ಶಕ್ತಿಯನ್ನು ಅದಾನಿ ಸಮೂಹದಿಂದ ಖರೀದಿಸಲು ನಿರ್ಧರಿಸಿದ್ದೇಕೆ?. ಇಂಧನ ಸಚಿವಾಲಯ, ಅದಾನಿ ಸಮೂಹದಿಂದ ಸುಮಾರು 8,785 ಕೋಟಿ ರೂ.ಗೆ 300 ಮೆಗಾವ್ಯಾಟ್ ದೀರ್ಘಾವಧಿಯ ಪವನ ಶಕ್ತಿಯನ್ನು 25 ವರ್ಷಗಳವರೆಗೆ ಖರೀದಿಸಲು ನಿರ್ಧರಿಸಿದೆ. ಈ 300 ಮೆಗಾವ್ಯಾಟ್ ದೀರ್ಘಾವಧಿಯ ಪವನ ಶಕ್ತಿಯನ್ನು ಪ್ರತಿ ಯೂನಿಟ್‌ಗೆ ರೂ 2.82 ದರದಲ್ಲಿ ಖರೀದಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಪಂಚರಾಜ್ಯ ಕಣ: ಇಂದು ಅಸ್ಸೋಂನಲ್ಲಿ ರಾಹುಲ್​, ಕೇರಳದಲ್ಲಿ ಪ್ರಿಯಾಂಕಾ ರೋಡ್​ ಶೋ

ವಿಜಯನ್ ಮತ್ತು ಮೋದಿ ಸರ್ಕಾರಗಳು ಒಟ್ಟಾಗಿ ಕೇರಳದ ಸೌರಶಕ್ತಿ ಕೋಟಾವನ್ನು ಶೇಕಡಾ 2.75 ರಿಂದ ಕೇವಲ 0.25 ಕ್ಕೆ ಇಳಿಸಿದ್ದೀರಿ. ಇದರಿಂದ ಅದಾನಿ ಸಮೂಹದಿಂದ ಪವನ ವಿದ್ಯುತ್ ಖರೀದಿಗೆ ಅನುಕೂಲವಾಗಿದೆಯೇ ಎಂದು ಸುರ್ಜೆವಾಲಾ ಆಕ್ಷೇಪಿಸಿದ್ದಾರೆ.

ತಿರುವನಂತಪುರಂ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲು ವಿಜಯನ್ ವಿರೋಧಿಸಿದ್ದು, ಇತರ ರಹಸ್ಯ ತಿಳಿವಳಿಕೆಗಳನ್ನು ಮುಚ್ಚಿಹಾಕುವ ಪ್ರಹಸನದ ಮುಂದುವರಿದ ಭಾಗವಾಗಿದೆ ಎಂದು ಆರೋಪಿಸಿದರು.

ಈ ಎಲ್ಲವು ಪಿಣರಾಯಿ ವಿಜಯನ್ ಮತ್ತು ನರೇಂದ್ರ ಮೋದಿ ನಡುವಿನ ರಹಸ್ಯ ತಿಳಿವಳಿಕೆಯತ್ತ ಗಮನ ಹರಿಸುತ್ತವೆ ಎಂದು ಕಿಡಿಕಾರಿದರು.

For All Latest Updates

TAGGED:

ABOUT THE AUTHOR

...view details