ಕರ್ನಾಟಕ

karnataka

ETV Bharat / bharat

ಸರ್ಕಾರದಿಂದ ಭಾರತ್​ ಜೋಡೋ ಯಾತ್ರೆಗೆ ಅಡ್ಡಿ ಯತ್ನ: ಕರ್ನಾಟಕ ಬಿಜೆಪಿ ಯಾತ್ರೆ ಪ್ರಶ್ನಿಸಿದ ಕಾಂಗ್ರೆಸ್​ - ಬಿಜೆಪಿ ಯಾತ್ರೆ

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ಭಾರತ್​ ​ಜೋಡೋ ಯಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಇದು ಸಾಧ್ಯವಾಗದಿದ್ದರೆ ಯಾತ್ರೆಯನ್ನು ಮುಂದೂಡಬೇಕು ಎಂದು ಸೂಚಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.

congress-questions-health-ministers-letter-to-rahul-over-covid-protocols
ಸರ್ಕಾರದಿಂದ ಭಾರತ್​ ಜೋಡೋ ಯಾತ್ರೆಗೆ ಅಡ್ಡಿ ಯತ್ನ: ಕರ್ನಾಟಕ ಬಿಜೆಪಿ ಯಾತ್ರೆ ಕಾಣುತ್ತಿಲ್ಲವೇ ಎಂದು ಕಾಂಗ್ರೆಸ್​ ಪ್ರಶ್ನೆ

By

Published : Dec 21, 2022, 8:21 PM IST

ನವದೆಹಲಿ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತ್​ ಜೋಡೋ ಯಾತ್ರೆಗೆ ಅಡ್ಡಿ ಮಾಡುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ಯಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಇದು ಸಾಧ್ಯವಾಗದಿದ್ದರೆ ಯಾತ್ರೆಯನ್ನು ಮುಂದೂಡಬೇಕು ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಪವನ್ ಖೇರಾ, ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಮತ್ತು ಭಾರತ್ ಜೋಡೋ ಯಾತ್ರೆ ಮಾತ್ರವೇ ಕಾಣಿಸುತ್ತಿದೆಯೇ?. ನಾವು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತೇವೆ. ಆದರೆ, ಇದಕ್ಕೂ ಮೊದಲು ಸರ್ಕಾರವು ಕೋವಿಡ್​ ನಿಯಮಗಳನ್ನು ತಿಳಿಸಬೇಕು. ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಖಚಿತಪಡಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಬಿಜೆಪಿ ಯಾತ್ರೆಗಳನ್ನು ನಡೆಸುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಈ ಯಾತ್ರೆಗಳು ಕಾಣುತ್ತಿಲ್ಲವೇ?. ಎರಡು ರಾಜ್ಯಗಳಲ್ಲಿ ಬಿಜೆಪಿ ಯಾತ್ರೆಗಳಿಗೆ ಜನರ ಸ್ಪಂದನೆ ಸಿಗುತ್ತಿಲ್ಲ. ಆದರೆ, ಕಾಂಗ್ರೆಸ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ ಎಂಬುದನ್ನು ನಾವು ಒಪ್ಪುತ್ತೇವೆ. ಆದರೂ, ಎರಡು ರಾಜ್ಯಗಳ ಬಿಜೆಪಿ ಮುಖ್ಯಸ್ಥರಿಗೆ ಇದೇ ರೀತಿಯ ಪತ್ರಗಳನ್ನು ಬರೆಯಲಾಗಿದೆಯೇ ಎಂದು ನಾವು ಸರ್ಕಾರವನ್ನು ಕೇಳಲು ಬಯಸುತ್ತೇವೆ ಎಂದು ಹೇಳಿದರು.

ರಾಜಕೀಯ ಪ್ರೇರಿತ ಪತ್ರ: ಎಐಸಿಸಿ ಕಾರ್ಯದರ್ಶಿ ಮನೀಷ್ ಚತ್ರತ್ ಅವರ ಪ್ರಕಾರ, ಸರ್ಕಾರವು ನಿರ್ದಿಷ್ಟ ಅಂಕಿ-ಅಂಶ ಮತ್ತು ಮಾರ್ಗಸೂಚಿಗಳೊಂದಿಗೆ ಸೂಚನೆ ನೀಡಬೇಕಿತ್ತು. ಆದರೆ, ರಾಜಕೀಯ ಪ್ರೇರಿತವಾಗಿದೆ. ಸೆಪ್ಟೆಂಬರ್ 7ರಿಂದ ಯಾತ್ರೆಯು ಸುಗಮವಾಗಿ ಸಾಗುತ್ತಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಹಾದುಹೋಗಿದೆ. ಪ್ರಸ್ತುತ ಹರಿಯಾಣದಲ್ಲಿ ಯಾತ್ರೆ ಸಾಗುತ್ತಿದ್ದು, ಡಿಸೆಂಬರ್ 24ರಂದು ದೆಹಲಿಯನ್ನು ಪ್ರವೇಶಿಸಲಿದೆ. ಇಲ್ಲಿಯವರೆಗೆ ಕೋವಿಡ್ ಪರಿಸ್ಥಿತಿಯು ಇನ್ನೂ ಅಷ್ಟೊಂದು ಆತಂಕಕಾರಿಯಾಗಿಲ್ಲದ ಕಾರಣ ಯಾವುದೇ ಸಮಸ್ಯೆ ಉಂಟಾಗಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಅಲ್ಲದೇ, ಭಾರತ್​ ಜೋಡೋ ಯಾತ್ರೆಗೆ ಡಿಸೆಂಬರ್ 25ರಿಂದ ವಿರಾಮ ಇರುತ್ತದೆ. ಜನವರಿ 3ರಂದು ಯಾತ್ರೆ ಪುನರಾರಂಭವಾಗುತ್ತದೆ. ಅಲ್ಲಿಯವೆರೆಗೆ ಸರ್ಕಾರದ ಬಳಿ ಕೋವಿಡ್​ನ ಕುರಿತು ಅಂಕಿ ಅಂಶಗಳು ಇದ್ದರೆ, ಅದನ್ನು ಸಾರ್ವಜನಿಕಗೊಳಿಸಬೇಕು. ಬಿಜೆಪಿ ಕೂಡ ರಾಜ್ಯಗಳಲ್ಲಿ ಯಾತ್ರೆಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದಲ್ಲೂ ಬಿಜೆಪಿಯವರು ನಿರತರಾಗಿದ್ದರು. ಇದರ ಬಗ್ಗೆ ಏನು ಸರ್ಕಾರ ಹೇಳುತ್ತದೆ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಇದೇ ರೀತಿಯ ಪತ್ರಗಳನ್ನು ಕಳುಹಿಸಲಾಗಿದೆಯೇ?: ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವರು ಬರೆದಿರುವ ಪತ್ರವು ವಾಸ್ತವವಾಗಿ ಬಿಜೆಪಿ ಸಂಸದ ಪಿಪಿ ಚೌಧರಿ ಬರೆದಿರುವ ಪತ್ರವಾಗಿದ್ದು, ಕೋವಿಡ್‌ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಎತ್ತಿ ಕೇಂದ್ರ ಸಚಿವರಿಗೆ ಈ ಪತ್ರ ಬರೆಯಲಾಗಿತ್ತು. ಆದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಇದೇ ರೀತಿಯ ಪತ್ರಗಳನ್ನು ಕಳುಹಿಸಲಾಗಿದೆಯೇ? ಅಥವಾ ಸಂಪೂರ್ಣ ಸಮಸ್ಯೆ ಭಾರತ್ ಜೋಡೋ ಯಾತ್ರೆಗೆ ಮಾತ್ರವೇ?. ಸರ್ಕಾರ ಯಾವುದೇ ಹೊಸ ಕೋವಿಡ್ ನಿಯಮಗಳನ್ನು ರೂಪಿಸಿದೆಯೇ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಧ್ಯಕ್ಷೆ ಸುಪ್ರಿಯಾ ಶ್ರಿನೇಟ್ ಕೂಡ ಪ್ರಶ್ನೆ ಮಾಡಿದ್ದಾರೆ.

ಆರೋಗ್ಯ ಸಚಿವಾಲಯದ ಪತ್ರದ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗುತ್ತಿದೆ. ಅದಕ್ಕಾಗಿಯೇ ಅವರು (ಬಿಜೆಪಿ ನಾಯಕರು) ಭಯಭೀತರಾಗಿದ್ದಾರೆ. ಕೆಲವು ದಿನಗಳ ಹಿಂದೆ ರಾಜಸ್ಥಾನದಲ್ಲಿ ಜೆಪಿ ನಡ್ಡಾ ನಡೆಸಿದ್ದ ಆಕ್ರೋಶ್ ಜಾತ್ರೆ ವಿಫಲವಾಗಿದೆ. ಈ ಸ್ಥಿತಿಯನ್ನು ಕಂಡು ಬಿಜೆಪಿಯೇ ಸಾಕಷ್ಟು ಗೊಂದಲಕ್ಕೆ ಒಳಗಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ಕೋವಿಡ್ ನಿಯಮ ಪಾಲಿಸಲಾಗದಿದ್ದರೆ ಯಾತ್ರೆ ಮುಂದೂಡಿ: ರಾಹುಲ್​ ಗಾಂಧಿಗೆ ಆರೋಗ್ಯ ಸಚಿವಾಲಯ ಸೂಚನೆ

ABOUT THE AUTHOR

...view details