ಕರ್ನಾಟಕ

karnataka

ETV Bharat / bharat

ಸಂಸತ್ತಿನಲ್ಲಿ ಅದಾನಿ, ರಾಹುಲ್​ ಹೇಳಿಕೆ ಗದ್ದಲ: ಅಧಿವೇಶನ ಮತ್ತೆ ಮುಂದೂಡಿಕೆ; ಕಾಂಗ್ರೆಸ್​ ಪ್ರತಿಭಟನೆ - ರಾಹುಲ್ ಹೇಳಿಕೆಗೆ ಜೆಪಿ ನಡ್ಡಾ ಪ್ರತಿಕ್ರಿಯೆ

ಸಂಸತ್‌ ಅಧಿವೇಶನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಉಭಯ ಸದನಗಳನ್ನು ಮಾರ್ಚ್ 20ಕ್ಕೆ ಮುಂದೂಡಲಾಗಿದೆ. ಸದನ ಮುಂದೂಡಿದ ಬಳಿಕ ಸಂಸತ್ತಿನ ಆವರಣದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯರು​ ಪ್ರತಿಭಟನೆ ನಡೆಸಿದರು.

congress protest in the Parliament premises  JPC inquiry into the Adani Group issue  Parliament session continue adjourned  ಅದಾನಿ ಗ್ರೂಪ್ ಅವ್ಯವಹಾರ  ರಾಹುಲ್​ ಗಾಂಧಿ ಹೇಳಿಕೆ  ಅಧಿವೇಶನ ಮತ್ತೆ ಮುಂದೂಡಿಕೆ  ಬಿಜೆಪಿ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ  ಅಧಿವೇಶನದಲ್ಲಿ ಗೊಂದಲದ ವಾತಾವರಣ ನಿರ್ಮಾಣ  ಉಭಯ ಸದನಗಳನ್ನು ಮಾರ್ಚ್ 20ಕ್ಕೆ ಮುಂದೂಡಿಕೆ  ಅದಾನಿ ಗ್ರೂಪ್ ಅವ್ಯವಹಾರವನ್ನು ಜೆಪಿಸಿ ತನಿಖೆ  ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ  ಸಂಸತ್ತಿನ ಎರಡನೇ ಬಜೆಟ್ ಅಧಿವೇಶನದ ಮುಂದೂಡಿಕೆ  ರಾಹುಲ್ ಹೇಳಿಕೆಗೆ ಜೆಪಿ ನಡ್ಡಾ ಪ್ರತಿಕ್ರಿಯೆ  ಎರಡನೇ ಹಂತದ ಬಜೆಟ್ ಸಭೆಗಳು ಪ್ರಾರಂಭ
ರಾಹುಲ್​ ಗಾಂಧಿ ಹೇಳಿಕೆ ಅಧಿವೇಶನ ಮತ್ತೆ ಮುಂದೂಡಿಕೆ

By

Published : Mar 17, 2023, 1:39 PM IST

ನವದೆಹಲಿ: ಅದಾನಿ ಗ್ರೂಪ್ ಅವ್ಯವಹಾರವನ್ನು ಜೆಪಿಸಿ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಸಂಸದರು ಸಂಸತ್ತಿನ ಆವರಣದಲ್ಲಿಂದು ಪ್ರತಿಭಟನೆ ನಡೆಸಿದ್ದಾರೆ.

ಇದೇ ವೇಳೆ, ಸಂಸತ್ತಿನ ಎರಡನೇ ಹಂತದ ಬಜೆಟ್ ಅಧಿವೇಶನದ ಮುಂದೂಡಿಕೆ ಮುಂದುವರಿದಿದೆ. ಮಾರ್ಚ್ 13 ರಂದು ಅಧಿವೇಶನ ಆರಂಭವಾಗಿ ಪದೇ ಪದೇ ಮುಂದೂಡಲ್ಪಡುತ್ತಿದೆ. ಇಂದು ಕಲಾಪ ಆರಂಭವಾದ ಕೂಡಲೇ ಪ್ರತಿಪಕ್ಷ ನಾಯಕರು ಅದಾನಿ ಪ್ರಕರಣದ ಕುರಿತು ಚರ್ಚೆಗೆ ಒತ್ತಾಯಿಸಿದರು. ಆದರೆ ಬಿಜೆಪಿ ಸದಸ್ಯರು ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದರು.

ವಿದೇಶದಲ್ಲಿ ರಾಹುಲ್ ಮಾತುಗಳು ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ದೂರಿದೆ. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಭೆಯನ್ನು ಸುಗಮವಾಗಿ ನಡೆಸುವಂತೆ ಮನವಿ ಮಾಡಿದರು. ಆದ್ರೆ ಈ ಮನವಿ ನಿರ್ಲಕ್ಷಿಸಿದ ಸದಸ್ಯರು ಸದನದಲ್ಲಿ ಗೊಂದಲದ ವಾತಾವರಣ ನಿರ್ಮಿಸಿದರು. ಪರಿಣಾಮ ಉಭಯ ಸದನಗಳನ್ನು ಮಾರ್ಚ್ 20ಕ್ಕೆ ಮುಂದೂಡಲಾಯಿತು.

ಬಳಿಕ, ಅದಾನಿ ಅವ್ಯವಹಾರದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿವೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭಾಗವಹಿಸಿದ್ದರು.

ರಾಹುಲ್ ಹೇಳಿಕೆಗೆ ಜೆ.ಪಿ.ನಡ್ಡಾ ಟೀಕೆ:ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ. ಲಂಡನ್​ನಲ್ಲಿ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ ನಾಶವಾಗಿದೆ ಎಂದು ಹೇಳಿರುವುದು ನಾಚಿಕೆಗೇಡು ಎಂದಿದ್ದಾರೆ.

ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಬೇರೆ ದೇಶಗಳ ಮಧ್ಯಸ್ಥಿಕೆಗೆ ಯತ್ನಿಸುತ್ತಿರುವ ರಾಹುಲ್ ಗಾಂಧಿ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ. ದೇಶದ ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ ವಿದೇಶದಲ್ಲಿ ಯಾವ ನಾಯಕರೂ ಇದನ್ನೂ ಕೇಳಿಲ್ಲ. ಪ್ರಸ್ತುತ ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವುದು ವಿಷಾದನೀಯ. ರಾಹುಲ್ ಗಾಂಧಿ ಈಗ ದೇಶವಿರೋಧಿ ‘ಟೂಲ್‌ಕಿಟ್‌’ನ ಖಾಯಂ ಸದಸ್ಯರು ಎಂದು ಹೇಳಿದರು.

ಅಂದಿನಿಂದ ಅದೇ ಕಥೆ..: ಮಾರ್ಚ್ 13 ರಂದು ಎರಡನೇ ಹಂತದ ಬಜೆಟ್ ಕಲಾಪಗಳು ಪ್ರಾರಂಭವಾದ ಸ್ವಲ್ಪ ಸಮಯದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಂಡನ್‌ನಲ್ಲಿ ರಾಹುಲ್ ಗಾಂಧಿ ಮಾಡಿದ ಕಾಮೆಂಟ್‌ಗಳ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಮಾಡಿದ ಟೀಕೆಗಳಿಗಾಗಿ ಸದನದ ಮುಂದೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು.

ರಕ್ಷಣಾ ಸಚಿವರ ಹೇಳಿಕೆಗೆ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು. ಮಾರ್ಚ್ 13ರಂದು ಆರಂಭವಾದ ರಾಹುಲ್ ಹೇಳಿಕೆ ವಿವಾದ ಇನ್ನೂ ಮುಂದುವರಿದಿದೆ. ಅಂದಿನಿಂದ ಉಭಯ ಸದನಗಳನ್ನು ಮುಂದೂಡಲಾಗ್ತಿದೆ.

ಇದನ್ನೂ ಓದಿ:ಅದಾನಿ ವಿಚಾರದಲ್ಲಿ ಪ್ರಧಾನಿ ಹೆದರುತ್ತಿದ್ದಾರೆ.. ಹೀಗಾಗಿ ತಮಾಷಾ ಸೃಷ್ಟಿಸುತ್ತಿದ್ದಾರೆ : ರಾಹುಲ್​ ಗಾಂಧಿ ಟೀಕೆ

ABOUT THE AUTHOR

...view details