ಕರ್ನಾಟಕ

karnataka

ETV Bharat / bharat

ಸೋನಿಯಾ ವಿಚಾರಣೆಗೆ ಕಾಂಗ್ರೆಸ್ ವಿರೋಧ: ಧರಣಿ ಕುಳಿತ ರಾಹುಲ್​, ಡಿಕೆಸು ಪೊಲೀಸ್‌ ವಶಕ್ಕೆ - ETV Bharat kannada news

ಸೋನಿಯಾ ಗಾಂಧಿಯವರನ್ನು ಇಡಿ ವಿಚಾರಣೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್​ ನಾಯಕರು ದೇಶದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.

congress-protest
ಸೋನಿಯಾ ವಿಚಾರಣೆಯ ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಭಟನೆ

By

Published : Jul 26, 2022, 12:54 PM IST

Updated : Jul 26, 2022, 11:03 PM IST

ನವದೆಹಲಿ:ನ್ಯಾಷನಲ್​ ಹೆರಾಲ್ಡ್​ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್​ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಸಂಸತ್ತಿನ ಗಾಂಧಿ ಪ್ರತಿಮೆಯಿಂದ ಹಿಡಿದು ವಿಜಯ್​ ಚೌಕ್ ಕಡೆಗೆ ಪಕ್ಷದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಹಗರಣ ಕುರಿತು ಇಡಿ ಮುಂದೆ ಸೋನಿಯಾ ಗಾಂಧಿ ಅವರಿಂದು 2ನೇ ಸುತ್ತಿನ ವಿಚಾರಣೆಗೆ ಹಾಜರಾಗಿದ್ದಾರೆ. ಪುತ್ರ ರಾಹುಲ್​ ಜೊತೆಗೂಡಿ ಅವರು ಆಗಮಿಸಿದ್ದರು.

ಪೊಲೀಸ್ ವಶಕ್ಕೆ ರಾಹುಲ್

ಧರಣಿ ಕುಳಿತ ರಾಹುಲ್​:ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದರು. ಬಳಿಕ ವಿಜಯ ಚೌಕ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಜೊತೆಗೂಡಿ ಧರಣಿ ಕುಳಿತರು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ರಾಹುಲ್​ ಗಾಂಧಿ, ರಾಜ್ಯದ ಸಂಸದ ಡಿ.ಕೆ.ಸುರೇಶ್​ ಸೇರಿದಂತೆ ಹಲವು ಸಂಸದರನ್ನು ವಶಕ್ಕೆ ಪಡೆದರು.

ಸೋನಿಯಾ ವಿಚಾರಣೆಗೆ ಕಾಂಗ್ರೆಸ್ ವಿರೋಧ

"ಹಣದುಬ್ಬರ, ನಿರುದ್ಯೋಗದ ಬಗ್ಗೆ ಚರ್ಚಿಸಲು ಸಂಸತ್ತಿನ ಒಳಗೂ ಬಿಡುತ್ತಿಲ್ಲ. ಅದರ ವಿರುದ್ಧ ಹೋರಾಟ ಮಾಡಲೂ ಅವಕಾಶ ನೀಡದೆ ನಮ್ಮನ್ನೂ ಸೇರಿದಂತೆ ಸಂಸದರನ್ನು ಬಂಧಿಸಲಾಗುತ್ತಿದೆ" ಎಂದು ದೆಹಲಿಯ ವಿಜಯ್ ಚೌಕ್‌ನಲ್ಲಿ ರಾಹುಲ್​ ಗಾಂಧಿ ಪ್ರತಿಕ್ರಿಯೆ ನೀಡಿದರು.

ರಾಜ್ಯದ ಸಂಸದ ಡಿ ಕೆ ಸುರೇಶ್​ರನ್ನು ಪೊಲೀಸರು ವಶಕ್ಕೆ ಪಡೆದ ರೀತಿ

ಮಲ್ಲಿಕಾರ್ಜನ ಖರ್ಗೆ ಪ್ರತಿಕ್ರಿಯೆ: "ಪೊಲೀಸರ ಅನುಮತಿ ಪಡೆದು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ನಮ್ಮ ಮುಖಂಡರು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗುತ್ತಿದೆ. ಇದೆಲ್ಲವೂ ಪ್ರತಿಪಕ್ಷಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಮತ್ತು ನಮ್ಮ ಧ್ವನಿ ಅಡಗಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮಾಡಿದ ಪಿತೂರಿ. ನಾವು ಇದಕ್ಕೆ ಹೆದರುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ:Monsoon Session.. 8ನೇ ದಿನವೂ ಮುಂದುವರಿದ ಪ್ರತಿಭಟನೆ, ಗದ್ದಲಕ್ಕೆ ಕಲಾಪ ಬಲಿ

Last Updated : Jul 26, 2022, 11:03 PM IST

ABOUT THE AUTHOR

...view details