ಚಂಡೀಗಢ: ಪಂಜಾಬ್‌ನಲ್ಲಿ ಮತದಾನಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಹಿಳೆಯರಿಗೆ ಒಂದು ಲಕ್ಷ ಸರ್ಕಾರಿ ಉದ್ಯೋಗ ಮತ್ತು ವರ್ಷಕ್ಕೆ ಎಂಟು ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳೊಂದಿಗೆ ತಿಂಗಳಿಗೆ 1,100 ರೂ. ನೀಡುವುದಾಗಿ ತಿಳಿಸಿದೆ.
ಹಾಗೆಯೇ ಮದ್ಯ ಮಾರಾಟ ಮತ್ತು ಮರಳು ಗಣಿಗಾರಿಕೆ ಸೇರಿದಂತೆ ಇತರೆ ಮಾಫಿಯಾಗಳನ್ನು ಕೊನೆಗೊಳಿಸುವುದಾಗಿ ಪಕ್ಷವು ಭರವಸೆ ನೀಡಿದೆ. ಈ ಸಂಬಂಧ ಮುಖಂಡ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮಾತನಾಡಿ, ಸರ್ಕಾರವು ರೈತರಿಂದ ಎಣ್ಣೆಕಾಳು, ದ್ವಿದಳ ಧಾನ್ಯಗಳು ಮತ್ತು ಜೋಳವನ್ನು ಸಂಗ್ರಹಿಸಲಿದೆ. ಪಕ್ಷದ 13 ಅಂಶಗಳ ಅಜೆಂಡಾವು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಸಮುದ್ರ ಶಾಂತವಾಗಿರುವಾಗ ಯಾರಾದರೂ ಪೈಲಟ್ ಆಗಬಹುದು. ಆದರೆ, ಚಂಡಮಾರುತ ಬಂದಾಗ, ನಾವು ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸಲು ಶಕ್ತರಾಗಿರಬೇಕು. ಇದು ಈ ಪ್ರಣಾಳಿಕೆಯ ಗುರಿಯಾಗಿದೆ ಎಂಬ ಹೇಳಿಕೆಯನ್ನೂ ಅವರು ನೀಡಿದ್ದಾರೆ.