ನವದೆಹಲಿ:ದೇಶದಲ್ಲಿ ಕೊರೊನಾ 2ನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಸಾವು ನೋವಿನ ಪ್ರಮಾಣವೂ ಏರಿಕೆಯಾಗುತ್ತಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ.
ಈ ನಡುವೆ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಹಾಗೂ ರಾಯ್ಬರೇಲಿಯ ಸಂಸದೆ ಸೋನಿಯಾ ಗಾಂಧಿ ಅಲ್ಲಿನ ಜನತೆಗೆ ನೆರವಿನ ಹಸ್ತ ಚಾಚಿದ್ದಾರೆ. ಅಲ್ಲಿನ ಜನತೆಯ ಚಿಕಿತ್ಸೆ ಮತ್ತು ಸಹಾಯಕ್ಕಾಗಿ ತಮ್ಮ ಸಂಸದರ ನಿಧಿಯಿಂದ 1 ಕೋಟಿ 17 ಲಕ್ಷ 77 ಸಾವಿರ ರೂಪಾಯಿ ನೀಡಿದ್ದಾರೆ.