ಕರ್ನಾಟಕ

karnataka

ETV Bharat / bharat

47 ನಾಯಕರ ಉನ್ನತ ಸಮಿತಿ ರಚಿಸಿದ ಖರ್ಗೆ: ಕರ್ನಾಟಕದ ಮೂವರಿಗೆ ಅವಕಾಶ, ತರೂರ್​ಗಿಲ್ಲ ಸ್ಥಾನ - ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಅವರನ್ನೊಳಗೊಂಡ ಉನ್ನತ ಸಮಿತಿಯನ್ನು ಮಲ್ಲಿಕಾರ್ಜುನ ಖರ್ಗೆ ರಚನೆ ಮಾಡಿದ್ದಾರೆ.

47 ನಾಯಕರ ಉನ್ನತ ಸಮಿತಿ ರಚಿಸಿದ ಖರ್ಗೆ: ಕರ್ನಾಟಕದ ಮೂವರಿಗೆ ಅವಕಾಶ... ತರೂರ್​ಗಿಲ್ಲಸ್ಥಾನ
congress-president-mallikarjun-kharge-constituted-the-steering-committee

By

Published : Oct 26, 2022, 9:24 PM IST

ನವದೆಹಲಿ:ಕಾಂಗ್ರೆಸ್​ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಉನ್ನತ ಸಮಿತಿ (ಸ್ಟೀರಿಂಗ್​ ಕಮಿಟಿ) ರಚಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್​ ಸಿಂಗ್, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಸೇರಿ 47 ಜನ ಸಮಿತಿಯಲ್ಲಿದ್ದು, ಅಧ್ಯಕ್ಷ ಚುನಾವಣೆಯಲ್ಲಿ ಸೋಲು ಕಂಡಿದ್ದ ಶಶಿ ತರೂರ್​​ ಈ ಸಮಿತಿಯಲ್ಲಿ ಸ್ಥಾನ ಪಡೆದಿಲ್ಲ.

ಅಧ್ಯಕ್ಷ ಸ್ಥಾನಕ್ಕೆ ನಡೆಸಿದ್ದ ಚುನಾವಣೆಯಲ್ಲಿ ಗೆದ್ದಿದ್ದ ಖರ್ಗೆ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದು, ಇದರ ಬೆನ್ನಲ್ಲೆ ಪಕ್ಷದ ಉನ್ನತ ಸಮಿತಿ ರಚನೆ ಮಾಡಿದ್ದಾರೆ. ಈ ಸಮಿತಿಯು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದೆ.

ಪಕ್ಷದ ಪ್ರಮುಖ ನಿರ್ಧಾರಗಳನ್ನು ಸಮಿತಿಯು ತೆಗೆದುಕೊಳ್ಳಲಿದೆ. ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ, ಪಿ.ಚಿದಂಬರಂ, ಅಜಯ್​ ಮಕೇನ್​, ಆನಂದ ಶರ್ಮಾ, ಜೈರಾಮ್ ರಮೇಶ್, ಮುಕುಲ್​ ವಾಸ್ನಿಕ್​, ಪ್ರಿಯಾಂಕಾ ಗಾಂಧಿ ವಾದ್ರಾ, ದಿಗ್ವಿಜಯ್​ ಸಿಂಗ್, ಸಲ್ಮಾನ್​ ಖುರ್ಷಿದ್​ ಸೇರಿ ಅನೇಕರು ಇದ್ದಾರೆ.

ಕರ್ನಾಟಕದ ಮೂವರಿಗೆ ಸಮಿತಿಯಲ್ಲಿ ಸ್ಥಾನ: ಕರ್ನಾಟಕದ ದಿನೇಶ್ ಗುಂಡೂರಾವ್, ಹೆಚ್​.ಕೆ.ಪಾಟೀಲ್​ ಮತ್ತು ಕೆ.ಹೆಚ್.ಮುನಿಯಪ್ಪ ಅವರಿಗೂ ಈ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ. ಹೊಸ ಅಧ್ಯಕ್ಷರು ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಎಲ್ಲ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಇದನ್ನೂ ಓದಿ:ಖರ್ಗೆ ನಾಯಕತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಲಿದೆ: ಸೋನಿಯಾ ಗಾಂಧಿ ವಿಶ್ವಾಸ

ABOUT THE AUTHOR

...view details