ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ 'ಪೋಸ್ಟರ್​​ ಗರ್ಲ್'​​ ಪ್ರಿಯಾಂಕಾಗೆ ಟಿಕೆಟ್​ ನಿರಾಕರಣೆ.. ಬಿಜೆಪಿ ಸೇರ್ಪಡೆ ಬಹುತೇಕ ಖಚಿತ! - ಕಾಂಗ್ರೆಸ್​ ಪೋಸ್ಟರ್​​ ಗರ್ಲ್​​ ಪ್ರಿಯಾಂಕಾ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ನ 'ಲಡ್ಕಿ ಹೂ, ಲಡ್​​ ಸಕ್ತಿ ಹೂ' ಪ್ರಚಾರದ ಪೋಸ್ಟರ್​ ಗರ್ಲ್​ ಹಾಗೂ ಯುಪಿ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಮೌರ್ಯಗೆ ಟಿಕೆಟ್ ನಿರಾಕರಿಸಲಾಗಿದ್ದು, ಇದರ ಬೆನ್ನಲ್ಲೇ ಅವರು ಪಕ್ಷ ತೊರೆಯಲು ಮುಂದಾಗಿದ್ದಾರೆ.

Priyanka Maurya
Priyanka Maurya

By

Published : Jan 19, 2022, 10:59 PM IST

ಲಖನೌ(ಉತ್ತರ ಪ್ರದೇಶ):ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ನಿರಾಕರಣೆಗೊಂಡಿರುವುದಕ್ಕಾಗಿ ಅಸಮಾಧಾನಗೊಂಡಿರುವ ಉತ್ತರ ಪ್ರದೇಶದ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಮೌರ್ಯ ಇದೀಗ ಬಿಜೆಪಿ ಸೇರುವುದು ಬಹುತೇಕ ಖಚಿತಗೊಂಡಿದೆ. 'ನಾನು ಹುಡುಗಿ, ಹೋರಾಡಬಲ್ಲೆ' (Ladki Hoon, Lad Sakti Hoon) ಪ್ರಚಾರದ ಕಾಂಗ್ರೆಸ್​ ಪೋಸ್ಟರ್ ಗರ್ಲ್​ ಖ್ಯಾತಿಯ ಪ್ರಿಯಾಂಕಾ ಮುಂದಿನ 2-3 ದಿನಗಳಲ್ಲಿ ಕಮಲ ಮುಡಿಯಲಿದ್ದಾರೆ.

ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪ

ಲಂಚ ನೀಡಲು ಒಪ್ಪದ ಕಾರಣ ನನಗೆ ಟಿಕೆಟ್ ನೀಡಲು ಪಕ್ಷ ಹಿಂದೇಟು ಹಾಕಿದೆ ಎಂದು ಆರೋಪ ಮಾಡಿರುವ ಅವರು, ಕಳೆದ ಒಂದು ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ವ್ಯಕ್ತಿಗೆ ಟಿಕೆಟ್​ ನೀಡಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್​ ಪಕ್ಷ ಪ್ರಚಾರಕ್ಕಾಗಿ ನನ್ನನ್ನು ಹಾಗೂ ನನ್ನ 10 ಲಕ್ಷ ಸಾಮಾಜಿಕ ಜಾಲತಾಣದ ಹಿಂಬಾಲಕರನ್ನ ಬಳಕೆ ಮಾಡಿಕೊಂಡಿದ್ದು, ಇದೀಗ ಟಿಕೆಟ್​ ನೀಡಲು ಹಿಂದೇಟು ಹಾಕಿದೆ. ಇದು ಅನ್ಯಾಯ. ಎಲ್ಲವೂ ಈಗಾಗಲೇ ನಿರ್ಧಾರಗೊಂಡಿತ್ತು ಎಂದಿದ್ದಾರೆ.

ಇದನ್ನೂ ಓದಿರಿ:ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದ ಬಿಜೆಪಿ

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಕಾಂಗ್ರೆಸ್ ಮಹಿಳೆಯರಿಗಾಗಿ ಲಡ್ಕಿ ಹೂ, ಲಡ್​​​ ಸಕ್ತಿ ಹೂ(Ladki Hoon, Lad Sakti Hoon) ಎಂಬ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನದ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಮೌರ್ಯ ಕಾಣಿಸಿಕೊಂಡಿದ್ದರು.

ಇವರು ಲಕ್ನೋದ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ಸಹ ವ್ಯಕ್ತಪಡಿಸಿದ್ದರು. ಆದರೆ, ಇತ್ತೀಚೆಗೆ ಕಾಂಗ್ರೆಸ್​ನಿಂದ ರಿಲೀಸ್ ಆಗಿರುವ ಪಟ್ಟಿಯಲ್ಲಿ ಇವರ ಹೆಸರು ಕಾಣಿಸಿಕೊಂಡಿರಲಿಲ್ಲ. ಇದರಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details