ಮಣಿಪುರ:ಮಾರ್ಚ್ 10 ರಂದು ನಡೆಯಲಿರುವ ಮತ ಎಣಿಕೆ ಮುನ್ನ ಮಣಿಪುರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಒಟ್ಟಿಗೆ ಇರಿಸಲು ತಂತ್ರ ರೂಪಿಸುತ್ತಿದೆ. ಪಕ್ಷದ ಹಿರಿಯ ನಾಯಕರೊಬ್ಬರು ಅನಾಮಧೇಯತೆಯ ಷರತ್ತಿನ ಮೇಲೆ ಈ ವಿಷಯ ತಿಳಿಸಿದ್ದಾರೆ. ಇನ್ನು ಕೆಲವು ಹಿರಿಯ ಎಐಸಿಸಿ ನಾಯಕರು ಬುಧವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಾರ್ಚ್ 10 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿಯಿಂದ ಅಭ್ಯರ್ಥಿಗಳ ಬೇಟೆಯನ್ನು ತಡೆಯಲು ಈ ಕ್ರಮವನ್ನು ಪ್ರಾರಂಭಿಸಲಾಗಿದೆ. 2017 ರವರೆಗೆ ಸತತ ಮೂರು ಅವಧಿಗೆ ಕಾಂಗ್ರೆಸ್ನ ಇಬೋಬಿ ಸಿಂಗ್ ಮಣಿಪುರ ರಾಜ್ಯವನ್ನು ಆಳಿದ್ದರು. ಬಿಜೆಪಿ ಪಕ್ಷವು 2017 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮಣಿಪುರದ ಪಟ್ಟಕ್ಕೆ ಏರಿದೆ. ಈ ವರ್ಷ ಬಿಜೆಪಿ ಪಕ್ಷ ಮಣಿಪುರದ 60 ವಿಧಾನಸಭಾ ಸ್ಥಾನಗಳಲ್ಲಿ 53 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.