ಆದೋನಿ, ಆಂಧ್ರಪ್ರದೇಶ:ಭಾರತ್ ಜೋಡೋ ಯಾತ್ರೆಯ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟೆಂಪಲ್ ರನ್ ಕೂಡ ಮುಂದುವರಿದಿದೆ. ಯಾತ್ರೆ ಕೇರಳದಲ್ಲಿ ಆರಂಭವಾದಂದಿನಿಂದ ರಾಹುಲ್ ಅವರು ಒಂದಲ್ಲಾ ಒಂದು ದೇಗುಲಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.
ಆಂಧ್ರದಲ್ಲಿ ಭಾರತ್ ಜೋಡೋ ಯಾತ್ರೆ..ಆದೋನಿಯ ಭವಾನಿ ದೇಗುಲದಲ್ಲಿ ರಾಹುಲ್ ಪೂಜೆ - Bharat Jodo Yatra
ಭಾರತ್ ಜೋಡೋ ಯಾತ್ರೆ ಆಂಧ್ರಪ್ರದೇಶದಲ್ಲಿ ಸಾಗುತ್ತಿದ್ದು, ದಾರಿ ಮಧ್ಯೆಯೇ ಆದೋನಿಯ ಭವಾನಿ ದೇಗುಲಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಆದೋನಿಯ ಭವಾನಿ ದೇಗುಲದಲ್ಲಿ ರಾಹುಲ್ ಪೂಜೆ
ಪ್ರಸ್ತುತ ಆಂಧ್ರಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ. ಇಂದು ಆದೋನಿ ನಗರಕ್ಕೆ ಕಾಲಿಟ್ಟಿದೆ. ಇದೇ ವೇಳೆ ಇಲ್ಲಿನ ಶ್ರೀಗಂಗಾ ಭವಾನಿ ದೇವಸ್ಥಾನಕ್ಕೆ ರಾಹುಲ್ ಗಾಂಧಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡಿರುವ ನಾಯಕರು ಕೂಡ ದೇವಸ್ಥಾನಕ್ಕೆ ಎಡತಾಕಿದ್ದಾರೆ.
ಓದಿ:ಎಐಸಿಸಿ ಅಧ್ಯಕ್ಷ ಮತದಾನ ವೇಳೆ ಖರ್ಗೆ ಪರ ಪ್ರಚಾರ.. ಶಶಿ ತರೂರ್ ಬಣದಿಂದ ನಿಯಮ ಉಲ್ಲಂಘನೆ ಆರೋಪ