ಕರ್ನಾಟಕ

karnataka

ETV Bharat / bharat

ಬಜೆಟ್‌ನಲ್ಲಿ ಬಡತನ, ಆಹಾರ ಭದ್ರತೆ ಬಗ್ಗೆ ಉಲ್ಲೇಖವಿಲ್ಲ: ಕೇಂದ್ರಕ್ಕೆ ಚಾಟಿ ಬೀಸಿದ ಕಪಿಲ್​ ಸಿಬಲ್​ - ಬಿಜೆಪಿ ಬಗ್ಗೆ ಕಪಿಲ್ ಸಿಬಲ್ ಟೀಕೆ

'ವಿಮಾನ ನಿಲ್ದಾಣಗಳನ್ನು ಖರೀದಿಸುವಂತಹ ಜನರಿಗೆ ಈ ಬಜೆಟ್ ಸೂಕ್ತವಾಗಿದೆ, ನೀವು ಕೇವಲ ಆಕಾಶವನ್ನೇ ನೋಡುತ್ತಿದ್ದೀರಿ, ಆದರೆ ನೀವು ನೆಲವನ್ನು ನೋಡಬೇಕು' ಎಂದು ಕೇಂದ್ರ ಬಜೆಟ್‌ ಕುರಿತಾಗಿ ಕಪಿಲ್ ಸಿಬಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Congress MP Kapil Sibal
ಕಾಂಗ್ರೆಸ್​ ನಾಯಕ ಕಪಿಲ್ ಸಿಬಲ್

By

Published : Feb 9, 2022, 6:01 PM IST

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್ ಮತ್ತು ಹಸಿರಿಗೆ ಒತ್ತು ಕೊಡಲಾಗಿದೆ. ಆದರೆ ಪ್ರಮುಖ ವಿಷಯವಾದ ಬಡತನ ಮತ್ತು ಆಹಾರ ಭದ್ರತೆಯಂತಹ ವಿಷಯಗಳನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಸಂಸದ ಕಪಿಲ್ ಸಿಬಲ್ ಅಭಿಪ್ರಾಯ ಪಟ್ಟಿದ್ದಾರೆ.

'ವಿಮಾನ ನಿಲ್ದಾಣಗಳನ್ನು ಖರೀದಿಸುವಂತಹ ಜನರಿಗೆ ಈ ಬಜೆಟ್ ನೀಡಲಾಗಿದೆ, ನೀವು ಕೇವಲ ಆಕಾಶವನ್ನೇ ನೋಡುತ್ತಿದ್ದೀರಿ, ಆದರೆ ನೀವು ನೆಲವನ್ನು ನೋಡಬೇಕು' ಎಂದು ಸಿಬಲ್ ಪ್ರತಿಪಾದಿಸಿದ್ದಾರೆ. ಸರ್ಕಾರದ ಚಿಂತನೆ, ಯೋಜನೆ ಕೇವಲ ಶ್ರೀಮಂತರಿಗಾಗಿ ಇರದೇ, ಬಡವರ ಬಗ್ಗೆಯೂ ಯೋಚಿಸಬೇಕೆಂಬ ಅರ್ಥದಲ್ಲಿ ಕಪಿಲ್ ಸಿಬಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕೇವಲ ಕೈಗಾರಿಕೆಗಳು ಸಂಪತ್ತನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸಿಬಲ್​​​​​​ ಹೇಳಿದರು.

ಇದನ್ನೂ ಓದಿ:ನಾಯಿಮರಿಯೊಂದಿಗೆ ಚೀನಾ ಗಡಿ ಪಯಣ ಬೆಳೆಸಿದ ತೆಲಂಗಾಣದ ಯುವ ಸೈಕ್ಲಿಸ್ಟ್

ಸಂಪತ್ತನ್ನು ವಿಶ್ವವಿದ್ಯಾನಿಲಯಗಳಿಂದ ಸೃಷ್ಟಿಸಲಾಗುತ್ತದೆ, ಕೈಗಾರಿಕೆಗಳಿಂದಲ್ಲ. ನಾನು 2014ರಿಂದ ಅಮೃತ ಕಾಲದ ಬದಲಿಗೆ ಬರೀ ರಾಹುಕಾಲವನ್ನು ಅನುಭವಿಸಿದ್ದೇನೆ ಎಂದು ಸಿಬಲ್ ಪರೋಕ್ಷವಾಗಿ ಬಿಜೆಪಿ ಸರ್ಕಾರದ ಆಡಳಿತ ಕುರಿತು ವಾಗ್ದಾಳಿ ನಡೆಸಿದರು.

ABOUT THE AUTHOR

...view details