ನವದೆಹಲಿ: ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿ ಜನರು ವೇತನ ಕಡಿತ ಎದುರಿಸುತ್ತಿರುವ ಸಮಯದಲ್ಲಿ, ಮೋದಿ ಸರ್ಕಾರ ಎಲ್‌ಪಿಜಿ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದರಿಂದ ಅವರಿಗೆ ನಾಚಿಕೆಯಾಗಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.
ದೆಹಲಿಯಲ್ಲಿ 14. 2 ಕೆಜಿ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಹೆಚ್ಚಿಸಲಾಗಿದ್ದು, ಇದರ ಒಟ್ಟು ವೆಚ್ಚ 769 ರೂ.ಆಗಲಿದೆ.
ಕಳೆದ 2 ತಿಂಗಳಲ್ಲಿ ಎಲ್‌ಪಿಜಿ ಅನಿಲ ಬೆಲೆ ಸಿಲಿಂಡರ್‌ಗೆ 175 ರೂ.ಗಳಷ್ಟು ಏರಿಕೆಯಾಗಿದೆ. ಫೆಬ್ರವರಿಯಲ್ಲಿ ನಾವು 75 ರೂ.ಗಳ ಬೆಲೆ ಏರಿಕೆ ಕಂಡಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ, ಜಾಗತಿಕ ಕಚ್ಚಾ ತೈಲ ದರಗಳು ಹೆಚ್ಚಿದ್ದರೂ, ಬೆಲೆಗಳು ಪ್ರತಿ ಸಿಲಿಂಡರ್‌ಗೆ ಸುಮಾರು 400 ರೂ. ಮಾತ್ರ ಇತ್ತು ಎಂದು ಕಾಂಗ್ರೆಸ್ನ ವಕ್ತಾರೆ ಸುಪ್ರಿಯಾ ಶ್ರೀನೇಟ್ ಹೇಳಿದ್ದಾರೆ.