ಜೋಧಪುರ್(ರಾಜಸ್ಥಾನ):ಕಂಠಪೂರ್ತಿ ಮಧ್ಯಪಾನ ಮಾಡಿ, ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೆಲವರ ಬಿಡುಗಡೆಯಾಗಿ ಶಾಸಕಿ ಪೊಲೀಸ್ ಠಾಣೆಯಲ್ಲಿ ಗಂಡನೊಂದಿಗೆ ಧರಣಿ ನಡೆಸಿರುವ ಘಟನೆ ನಡೆದಿದೆ. ಕಾಂಗ್ರೆಸ್ ಶಾಸಕಿ ಸಂಬಂಧಿಕರು ವಾಹನ ಚನಾವಣೆ ಮಾಡಿ ಸಿಕ್ಕಿಬಿದ್ದಿದ್ದು, ಇದರ ಮಾಹಿತಿ ಗೊತ್ತಾಗುತ್ತಿದ್ದಂತೆ ಠಾಣೆಗೆ ಆಗಮಿಸಿರುವ ಶಾಸಕಿ ಮೀನಾ ಕನ್ವರ್ ಮತ್ತು ಆಕೆಯ ಪತಿ ಠಾಣೆಯಲ್ಲಿ ಧರಣಿ ನಡೆಸಿದರು.
ರಾಜಸ್ಥಾನದ ಜೋಧಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕಿ ಮೀನಾ ಕನ್ವರ್ ಮತ್ತು ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದಾರೆ. ಕುಡಿದು ವಾಹನ ಚಲಾವಣೆ ಮಾಡಿ, ಬಂಧನಕ್ಕೊಳಗಾದವರ ಬಿಡುಗಡೆ ಮಾಡುವಂತೆ ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಜೊತೆಗೆ ಎಲ್ಲ ಮಕ್ಕಳು ಕುಡಿಯುತ್ತಾರೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.