ಚಂಡೀಗಢ:ಪಂಜಾಬ್ನ 16 ನೇ ಮುಖ್ಯಮಂತ್ರಿಯಾಗಿ ಎಸ್. ಚರಣಜಿತ್ ಸಿಂಗ್ ಚನ್ನಿ ಅಧಿಕಾರ ಸ್ವೀಕರಿಸಿದ್ದಾರೆ. ಚರಣ್ಜಿತ್ ಸಿಂಗ್ ಚನ್ನಿಗೆ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ ಪ್ರತಿಜ್ಞಾವಿಧಿ ಬೋಧಿಸಿದರು.
ಪಂಜಾಬ್ 16ನೇ ಮುಖ್ಯಮಂತ್ರಿಯಾಗಿ ಎಸ್. ಚರಣಜಿತ್ ಸಿಂಗ್ ಚನ್ನಿ ಪದಗ್ರಹಣ - ಎಸ್. ಚರಣಜಿತ್ ಸಿಂಗ್ ಪದಗ್ರಹಣ
ಪಂಜಾಬ್ನ 16ನೇ ಮುಖ್ಯಮಂತ್ರಿಯಾಗಿ ಎಸ್. ಚರಣಜಿತ್ ಸಿಂಗ್ ಚನ್ನಿ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ನಾಯಕ ಸುಖಜಿಂದರ್ ಎಸ್ ರಾಂಧವಾ, ಓಪಿ ಸೋನಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚನ್ನಿ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಂಜಾಬ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಭಾಗಿಯಾಗಿದ್ದರು. ಪದಗ್ರಹಣದ ಬಳಿಕ ನಾಯಕರು ಚರಣಜಿತ್ ಸಿಂಗ್ಗೆ ಶುಭಕೋರಿದರು.
ಕಾರ್ಯಕ್ರಮದ ಬಳಿಕ ನೂತನ ಸಿಎಂ ಹಾಗೂ ಸಚಿವರ ಜತೆ ರಾಹುಲ್ ಗಾಂಧಿ ಸಭೆ ನಡೆಸುವ ಸಾಧ್ಯತೆಯಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ರಾಜೀನಾಮೆಯಿಂದಾಗಿ ತೆರವುಗೊಂಡಿದ್ದ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ದಲಿತ ಮುಖಂಡ ಚರಣಜಿತ್ ಸಿಂಗ್ ಚನ್ನಿ (58) ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿತ್ತು.