ನವದೆಹಲಿ:ಕರ್ನಾಟಕದಲ್ಲೂಪೆಗಾಸಸ್ ಸ್ಪೈವೇರ್ ಮೂಲಕ ರಾಜಕೀಯ ನಾಯಕರುಗಳ ಹ್ಯಾಕಿಂಗ್ ನಡೆದಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸುವ ಸಂಚು ರೂಪಿಸಿ ಸರ್ಕಾರ ಕೆಡವಿರುವುದು ಈಗ ಬಟಾಬಯಲಾಗಿದೆ. ಕರ್ನಾಟಕ ಮಾತ್ರವಲ್ಲ, ಮಧ್ಯಪ್ರದೇಶ, ಗೋವಾ, ಅರುಣಾಚಲ ಪ್ರದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಬಿಜೆಪಿಯವರು ಕೆಡವಿದ್ದಾರೆ. ಹೀಗಾಗಿ ಒಂದೇ ಒಂದು ಕ್ಷಣವೂ ಮೋದಿ ಮತ್ತು ಅಮಿತ್ ಶಾ ಅಧಿಕಾರದಲ್ಲಿ ಇರಬಾರದು ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಚುನಾಯಿತ ಸರ್ಕಾರಗಳನ್ನು ಕೆಡಲು ಗೂಢಚಾರಿಕೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿಯೇ ಹ್ಯಾಕಿಂಗ್ ನಡೆಸಲಾಗಿದೆ ಎಂದು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಆರೋಪಿಸಿದರು.