ಭಾರತ್ ಜೋಡೋ ಯಾತ್ರೆಯಲ್ಲಿ ಶೂಲೇಸ್ ಕಟ್ಟಿಕೊಳ್ಳುತ್ತಿರುವ ಜಿತೇಂದ್ರ ಸಿಂಗ್ ಅಲ್ವಾರ್ (ರಾಜಸ್ಥಾನ):ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಲ್ವಾರ್ ಅವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಶೂಲೇಸ್‌ಗಳನ್ನು ಕಟ್ಟುತ್ತಿದ್ದಾರೆ ಎಂದು ಹೇಳುವ ವಿಡಿಯೋವನ್ನು ಶೇರ್ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಕ್ಷಮೆ ಯಾಚಿಸಬೇಕು ಮತ್ತು ಆ ಟ್ವೀಟ್ ಡಿಲೀಟ್ ಮಾಡಬೇಕು. ಇಲ್ಲವೇ ಕಾನೂನು ಕ್ರಮ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಳವಿಯಾ ಹೇಳಿಕೆಗೆ ತಿರುಗೇಟು ನೀಡಿರುವ ಜಿತೇಂದ್ರ ಸಿಂಗ್, ಮಾಳವಿಯಾ ಅವರ ಹೇಳಿಕೆ ಸಂಪೂರ್ಣ ಸುಳ್ಳು ಹಾಗೂ ಮಾನಹಾನಿರ ಎಂದು ಟ್ವೀಟ್ ಮಾಡಿದ್ದಾರೆ. ಟ್ವಿಟರ್ನಲ್ಲಿ 'ಆಡಳಿತ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಇಲಾಖೆಯ ಉಸ್ತುವಾರಿಯಾಗಿ ನಿಮ್ಮ ಟ್ವೀಟ್ ಸಂಪೂರ್ಣ ಸುಳ್ಳು ಮತ್ತು ಮಾನಹಾನಿಕರವಾಗಿದೆ.
ವಾಸ್ತವ ಎಂದರೆ ನನ್ನ ಮನವಿಯ ಮೇರೆಗೆ ರಾಹುಲ್ ಗಮನ ಸೆಳೆದ ನಂತರ ಅವರು ನನ್ನದೇ ಶೂಲೇಸ್‌ಗಳನ್ನು ಕಟ್ಟಿಕೊಳ್ಳಲು ಸ್ವಲ್ಪ ವಿರಾಮ ನೀಡಿದರು. ಟ್ವೀಟ್ ಡಿಲಿಟ್ ಮಾಡಿ ರಾಹುಲ್ ಗಾಂಧಿ ಅವರಿಗೆ ಕ್ಷಮೆಯಾಚಿಸಿ ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ' ಎಂದು ಬರೆದಿದ್ದಾರೆ.
ಟ್ವಿಟ್ಟರ್‌ನಲ್ಲಿ ಅಮಿತ್ ಮಾಳವೀಯ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಜಿತೇಂದ್ರ ಸಿಂಗ್ ಅವರು ಬಗ್ಗಿದಾಗ ರಾಹುಲ್ ಗಾಂಧಿ ಅವರು ಇತರ ಕಾಂಗ್ರೆಸ್ ನಾಯಕರ ಜೊತೆಗೆ ನಡೆಯುತ್ತಿರುವುದನ್ನು ಕಾಣಬಹುದು. ಇದನ್ನು ಮಾಳವಿಯಾ ಅವರು, ಜಿತೇಂದ್ರ ಸಿಂಗ್ ಅವರು ರಾಹುಲ್ ಗಾಂಧಿಯ ಶೂಲೇಸ್‌ಗಳನ್ನು ಕಟ್ಟಲು ಬಗ್ಗಿದ್ದಾರೆ. ರಾಹುಲ್ ಗಾಂಧಿ 'ಸೊಕ್ಕಿನ ದಂಗೆಕೋರ'. ತಮ್ಮ ಶೂಲೇಸ್‌ಗಳನ್ನು ತಾವೇ ಕಟ್ಟಿಕೊಳ್ಳುವ ಬದಲು ಜಿತೇಂದ್ರ ಸಿಂಗ್ ಅವರ ಬೆನ್ನು ತಟ್ಟುತ್ತಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ:ಸರ್ಕಾರದಿಂದ ಭಾರತ್ ಜೋಡೋ ಯಾತ್ರೆಗೆ ಅಡ್ಡಿ ಯತ್ನ: ಕರ್ನಾಟಕ ಬಿಜೆಪಿ ಯಾತ್ರೆ ಪ್ರಶ್ನಿಸಿದ ಕಾಂಗ್ರೆಸ್