ನವದೆಹಲಿ:ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಜನರಿಂದ ನೈಜ ಪರಿಸ್ಥಿತಿಯನ್ನು ತಿಳಿಯಲು ನಿರಂತರವಾಗಿ ಒಂದಿಲ್ಲೊಂದು ಪ್ರದೇಶಕ್ಕೆ ತೆರಳುತ್ತಿದ್ದಾರೆ. ಈ ಬಾರಿ ದೆಹಲಿಯ ಓಖ್ಲಾ ಇಂಡಸ್ಟ್ರಿಯಲ್ ಏರಿಯಾದ ಮೊದಲ ಹಂತದಲ್ಲಿರುವ ಮೋಟಾರ್ ಸೈಕಲ್ ವರ್ಕ್ಶಾಪ್ಗೆ ಭೇಟಿ ನೀಡಿದರು. ಸುಮಾರು ಅರ್ಧಗಂಟೆ ಕಾಲ ಗಾಂಧಿ ಅಲ್ಲಿಯೇ ಇದ್ದರು.
ಈ ವೇಳೆ ಅಲ್ಲಿ ನೆರೆದಿದ್ದವರೊಂದಿಗೆ ರಾಹುಲ್ ಹಸ್ತಲಾಘವ ಮಾಡಿದರು. ಜನರು ರಾಹುಲ್ ಗಾಂಧಿ ಪರ ಘೋಷಣೆಗಳನ್ನು ಕೂಗಿದರು. ರಾಹುಲ್ ಜನರ ಕೆಲಸದ ಬಗ್ಗೆ ತಿಳಿದುಕೊಂಡರು. ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು. ನೆರೆದಿದ್ದ ಜನರೊಂದಿಗೆ ಭಾರತ್ ಜೋಡೋ ಯಾತ್ರೆಯ ಬಗ್ಗೆಯೂ ಚರ್ಚಿಸಿದರು. ಇಲ್ಲಿನ ಸ್ಥಳೀಯರ ದೃಷ್ಟಿಯಲ್ಲಿ ಭಾರತ್ ಜೋಡೋ ಯಾತ್ರೆ ಹೇಗಿತ್ತು ಎಂಬುದನ್ನು ತಿಳಿದುಕೊಂಡರು.
ರಾಹುಲ್ ಗಾಂಧಿ ಮೋಟಾರ್ ಸೈಕಲ್ ವರ್ಕ್ಶಾಪ್ಗೆ ಭೇಟಿ ತರಕಾರಿ ವ್ಯಾಪಾರಿ ರಾಮೇಶ್ವರ್ ಭೇಟಿ:ಆಜಾದ್‌ಪುರ ಮಂಡಿಯ ತರಕಾರಿ ಮಾರಾಟಗಾರ ರಾಮೇಶ್ವರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರ ನೋವು ಆಲಿಸಿದರು. ನಂತರ ಟ್ವೀಟ್ ಮಾಡಿ, ''ರಾಮೇಶ್ವರ್ ಅವರು ಉತ್ಸಾಹಭರಿತ ವ್ಯಕ್ತಿ. ಕೋಟಿಗಟ್ಟಲೆ ಭಾರತೀಯರ ಆಕಾಂಕ್ಷೆಗಳು ಅವರಲ್ಲಿ ಗೋಚರಿಸುತ್ತವೆ" ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ ಈ ಸ್ಥಳಗಳಿಗೆ ಭೇಟಿ:ಇದಕ್ಕೂ ಮುನ್ನ ರಾಹುಲ್ ಗಾಂಧಿ (ಆಗಸ್ಟ್ 1) ಆಜಾದ್‌ಪುರ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿಗಳ ಬೆಲೆ ಏರಿಕೆ ಕುರಿತು ಮಾರಾಟಗಾರರು ಹಾಗೂ ಗ್ರಾಹಕರೊಂದಿಗೆ ಮಾತನಾಡಿದ್ದರು. ಇದಕ್ಕೆ ಕೆಲವು ದಿನಗಳ ಮೊದಲು ಗಾಂಧಿಯವರು ಸೋನಿಪತ್‌ನ ರೈತರ ಹೊಲಗಳಿಗೆ ಆಗಮಿಸಿ ಭತ್ತದ ನಾಟಿ ಮಾಡುವ ರೈತರೊಂದಿಗೆ ಸಮಯ ಕಳೆದರು. ರೈತರ ಮೂಲಭೂತ ಸಮಸ್ಯೆಗಳನ್ನು ತಿಳಿದುಕೊಂಡರು. ಇದಲ್ಲದೇ ಕೆಲ ದಿನಗಳ ಹಿಂದೆ ಕರೋಲ್ ಬಾಗ್ನ ಬೈಕ್ ರಿಪೇರಿ ಮಾರುಕಟ್ಟೆಗೆ ಮೆಕ್ಯಾನಿಕ್ಗಳ ಸಮಸ್ಯೆ ಅರಿಯಲು ಆಗಮಿಸಿದ್ದರು.
ರಾಹುಲ್ ಎದುರು ಕಣ್ಣೀರು:ಆಜಾದ್ ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ರಾಮೇಶ್ವರ್ ವ್ಯಕ್ತಿ. ಕೆಲ ದಿನಗಳ ಹಿಂದೆ ಆಜಾದ್ ಪುರ ಮಾರುಕಟ್ಟೆಯಲ್ಲಿ ರಾಮೇಶ್ವರ್ ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಈ ಮಾತುಕತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಬೆಲೆ ಏರಿಕೆ ಕುರಿತು ಪ್ರಸ್ತಾಪಿಸಿ ರಾಮೇಶ್ವರ್ ಭಾವುಕರಾದರು. ಸೋಮವಾರ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೊತೆ ಊಟ ಸೇವಿಸಿದ್ದರು.
ಇದನ್ನೂ ಓದಿ:Sharad Pawar: 'ಇಂಡಿಯಾ ಒಕ್ಕೂಟ'ದಲ್ಲಿ ಗೊಂದಲವಿಲ್ಲ, ಬಿಜೆಪಿ ಜೊತೆ ಎನ್ಸಿಪಿ ಸೇರಲ್ಲ: ಶರದ್ ಪವಾರ್