ನವದೆಹಲಿ:ದೇಶದಲ್ಲಿ ಇಂಧನ, ಸಿಲಿಂಡರ್, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಪಕ್ಷದ ನಾಯಕ ರಾಹುಲ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನಧನ್ ಯೋಜನೆ ಬಗ್ಗೆ ವಿಡಂಬನಾತ್ಮಕ ಟ್ವೀಟ್ ಮಾಡಿದ್ದಾರೆ.
ಇಂಧನವನ್ನು ಬೈಕ್, ಕಾರು, ಲಾರಿಗಳಿಗೆ ತುಂಬಿಸಿಕೊಳ್ಳಲು ದುಪ್ಪಟ್ಟು ದರ ನೀಡಬೇಕು ಎಂಬುದನ್ನು ತೋರಿಸುವ ರೀತಿಯ ಚಿತ್ರವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಇದೊಂದು ಲೂಟ್ ಸರ್ಕಾರವಾಗಿದೆ ಎಂದು ಟೀಕಿಸಿದ್ದಾರೆ.