ಕರ್ನಾಟಕ

karnataka

ETV Bharat / bharat

ವೃದ್ಧಾಶ್ರಮದಲ್ಲಿ 'ಓಣಂ ಸಾದ್ಯ' ಸವಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ - ಮಲಪ್ಪುರಂನಲ್ಲಿ ವೃದ್ಧಾಶ್ರಮಕ್ಕೆ ಭೇಟಿ

ಎರಡು ದಿನಗಳ ವೈನಾಡು ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೃದ್ಧಾಶ್ರಮವೊಂದರಲ್ಲಿ ಓಣಂ ಸಾದ್ಯ ಸವಿದಿದ್ದಾರೆ.

Congress leader Rahul Gandhi enjoys Onam Sadhya at old age home in Malappuram
ವೃದ್ಧಾಶ್ರಮದಲ್ಲಿ 'ಓಣಂಸದ್ಯ' ಸವಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

By

Published : Aug 18, 2021, 1:58 AM IST

Updated : Aug 18, 2021, 6:10 AM IST

ಮಲಪ್ಪುರಂ, ಕೇರಳ: ಕಾಂಗ್ರೆಸ್ ನಾಯಕ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಕೇರಳದ ಮಲಪ್ಪುರಂಗೆ ಭೇಟಿ ನೀಡಿದ್ದು, ಓಣಂ ಹಬ್ಬದ ಪ್ರಯುಕ್ತ ತಯಾರಿಸಲಾಗಿದ್ದ 'ಓಣಂ ಸಾದ್ಯ' (ವಿವಿಧ ಭಕ್ಷ್ಯಗಳು) ಸವಿದಿದ್ದಾರೆ.

ವಂಡೂರ್​ನಲ್ಲಿರುವ ಗಾಂಧಿ ಭವನ ಸ್ನೇಹಾರಾಮಂ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿ ನೆಲೆಸಿದ್ದವರ ಜೊತೆಗೂಡಿ ಓಣಂ ಓಣಂ ಸಾದ್ಯವನ್ನು ಸವಿದಿದ್ದಾರೆ. ಎರಡು ದಿನಗಳ ವಯನಾಡು ಪ್ರವಾಸ ಕೈಗೊಂಡಿರುವ ಅವರು ಆಗಸ್ಟ್ 16ರಂದು ವೈನಾಡಿಗೆ ಬಂದಿದ್ದರು.

ತಮ್ಮದೇ ಕ್ಷೇತ್ರವಾದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಸಭೆಯೊಂದನ್ನು ನಡೆಸಿದರು. ಇದೇ ವೇಳೆ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ನನ್ನ ಕೊಂದರೂ ಸರಿ ಆಫ್ಘನ್​ ತೊರೆಯಲ್ಲ: ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ

Last Updated : Aug 18, 2021, 6:10 AM IST

ABOUT THE AUTHOR

...view details