ರಾಜ್ಪುರ(ಪಂಜಾಬ್):ಪಂಜಾಬ್ ವಿಧಾನಸಭಾ ಚುನಾವಣೆ 2022ರ ಕಾವು ಜೋರಾಗಿದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿನತ್ತ ಚಿತ್ತ ಹರಿಸಿವೆ.
ದೇಶದ ಪ್ರಬಲ ನಾಯಕರು ಪಂಜಾಬ್‌ನಲ್ಲಿ ಮೊಕ್ಕಾಂ ಹೂಡಿ ನಿರಂತರವಾಗಿ ಅಬ್ಬರಿಸುತ್ತಿದ್ದು, ಇಂದು ಅಂತಿಮ ದಿನದ ಮತಬೇಟೆ ನಡೆಯುತ್ತಿದೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ ಪ್ರಚಾರ ಸಭೆಗಳ ನಂತರ ರಾಜ್ಪುರದ ಡಾಬಾವೊಂದಕ್ಕೆ ಪಕ್ಷದ ಮುಖಂಡರೊಂದಿಗೆ ಆಗಮಿಸಿ ರೊಟ್ಟಿ ಸವಿದು ದಣಿವಾರಿಸಿಕೊಂಡಿದ್ದು ಕಂಡುಬಂತು.
ಇದನ್ನೂ ಓದಿ:ಭಾರತ ಪ್ರವೇಶಿಸಿದ್ದ 6 ಮೀನುಗಾರರು ಸೇರಿ 12 ಮಂದಿ ಕೈದಿಗಳು ಪಾಕಿಸ್ತಾನಕ್ಕೆ ವಾಪಸ್
ಚುನಾವಣಾ ಕಣ:ರಾಜ್ಯದಲ್ಲಿ ಬಿಜೆಪಿ ಬಗ್ಗೆ ಹೇಳುವುದಾದರೆ ಪ್ರಧಾನಿ ಮೋದಿ ಸೇರಿದಂತೆ ಪ್ರಬಲ ನಾಯಕರು ಈಗಾಗಲೇ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣೆ ಗೆಲ್ಲುವ ಕಸರತ್ತಿನಲ್ಲಿ ಕಾಂಗ್ರೆಸ್‌ನ ನಾಯಕರು ಕೂಡ ಹಿಂದೆ ಬಿದ್ದಿಲ್ಲ. ಇನ್ನು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸಹ ರಾಜ್ಯದಲ್ಲೇ ಬೀಡು ಬಿಟ್ಟು ಅಧಿಕಾರದ ಗದ್ದುಗೆ ಪಡೆಯಲು ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ಫೆಬ್ರವರಿ 20 ರಂದು ಮತದಾನ ನಿಗದಿಯಾಗಿದೆ. ಮಾರ್ಚ್ 10 ರಂದು ಅಭ್ಯರ್ಥಿಗಳ ಫಲಿತಾಂಶ ಹೊರಬೀಳಲಿದೆ.