ನವದೆಹಲಿ:ಬಿಜೆಪಿ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದೆ. ಹಾಗಾಗಿ ಲಸಿಕೆಯ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎತ್ತುವಂತಹ ಸಂದರ್ಭ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.
"ಬಿಜೆಪಿ ಸರ್ಕಾರವು ಕೊರೊನಾವನ್ನು ಸಂಪೂರ್ಣವಾಗಿ ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದೆ. ಲಸಿಕೆ ಕುರಿತ ವಿವಾದವು ಅದರ ಇತ್ತೀಚಿನ ಅಭಿವ್ಯಕ್ತತೆ ಆಗಿದೆ. ಹಾಗಾಗಿ ಅದರ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆ ಮೂಡಿರುವ ಸಂದರ್ಭ ಈ ಲಸಿಕೆಯನ್ನು ಸ್ವತಃ ಯಾರು ಪಡೆಯಲಿದ್ದಾರೆ", ಎಂದು ತಿವಾರಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಸಿಎಂ ಯಾರು ಬೇಕಾದರೂ ಆಗಲಿ... ವಿಧಾನಸೌಧದಲ್ಲಿ ಕಾಂಗ್ರೆಸ್ ಧ್ವಜ ಹಾರಿದರೆ ಸಾಕು: ಡಿಕೆಶಿ
"ಬಿಜೆಪಿ ಸರ್ಕಾರವು ಆ ಕಂಪನಿಗೆ ದೊಡ್ಡ ಅವಮಾನ ಮಾಡಿದೆ. ಅದರ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಹೂಡಿಕೆ ಮಾಡಿರಬೇಕು. ತಮ್ಮ 'ಆತ್ಮನಿರ್ಭರ ಭಾರತ್' ವನ್ನು ಸಾಬೀತುಪಡಿಸುವ ತರಾತುರಿಯಲ್ಲಿ ಅವರು ಮೂರನೇ ಹಂತದ ಪ್ರಯೋಗದಲ್ಲಿ ಪೂರ್ಣಗೊಳ್ಳದ ಲಸಿಕೆಗೆ ಪರವಾನಗಿ ನೀಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ವಿಶ್ವಕ್ಕೆ ಕೋವಿಡ್-19 ಲಸಿಕೆಗಳನ್ನು ಸುಗಮವಾಗಿ ಬಿಡುಗಡೆ ಮಾಡುವ ಭರವಸೆಯನ್ನು ಮಂಗಳವಾರ ತಿಳಿಸಿವೆ.