ತಿರುವನಂತಪುರಂ (ಕೇರಳ):ಮನೆಯಲ್ಲಿ ಬಿದ್ದು ಕಾಂಗ್ರೆಸ್‌ನ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಪ್ರತಾಪವರ್ಮಾ ಥಂಪನ್ ನಿಧನ ಹೊಂದಿದ್ದಾರೆ. 62 ವರ್ಷದ ವಯಸ್ಸಿನ ಪ್ರತಾಪವರ್ಮಾ ಅವರನ್ನು ಸ್ನಾನಗೃಹದಲ್ಲಿ ಕಾಲು ಜಾರಿ ಬಿದ್ದ ಬಳಿಕ ಕೊಲ್ಲಂನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಥಂಪನ್ ಕೊಲ್ಲಂನ ಚತನೂರ್ ವಿಧಾನಸಭಾ ಕ್ಷೇತ್ರದಲ್ಲಿ 2001ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು. ಆದರೆ, 2006ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 2012ರಿಂದ ಎರಡು ವರ್ಷಗಳ ಕಾಲ ಪಕ್ಷದ ಕೊಲ್ಲಂ ಜಿಲ್ಲಾ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.