ಕರ್ನಾಟಕ

karnataka

ETV Bharat / bharat

ಕರೆನ್ಸಿ ನೋಟುಗಳ ಮೇಲೆ ಅಂಬೇಡ್ಕರ್ ಚಿತ್ರ ಮುದ್ರಿಸಿ: ಮನೀಶ್ ತಿವಾರಿ ಸಲಹೆ - ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಮನೀಶ್ ತಿವಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದು, ಭಾರತೀಯ ರೂಪಾಯಿಗಳ ಹೊಸ ಸರಣಿಯಲ್ಲಿ ಮಹಾತ್ಮ ಗಾಂಧಿಯವರ ಚಿತ್ರದ ಜೊತೆಗೆ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಫೋಟೋ ಇರಬೇಕು ಎಂದು ಬರೆದಿದ್ದಾರೆ.

ಕರೆನ್ಸಿ ನೋಟುಗಳ ಮೇಲೆ ಡಾ. ಅಂಬೇಡ್ಕರ್ ಚಿತ್ರ ಮುದ್ರಿಸಿ: ಮನೀಶ್ ತಿವಾರಿ
congress-leader-manish-tewari-says-why-not-dr-babasahib-ambedkars-photograph-on-new-series-of-currency-notes

By

Published : Oct 27, 2022, 1:57 PM IST

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾರತೀಯ ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ಗಣೇಶ ಚಿತ್ರ ಮುದ್ರಿಸಬೇಕೆಂದು ಬುಧವಾರ ಹೇಳಿದ್ದರು. ಹೊಸ ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿಯವರ ಜೊತೆಗೆ ಲಕ್ಷ್ಮಿ ಮತ್ತು ಗಣೇಶ ದೇವರುಗಳ ಫೋಟೋಗಳನ್ನು ಸಹ ಪ್ರಿಂಟ್ ಮಾಡಬೇಕೆಂದು ಅವರು ಹೇಳಿದ್ದರು.

ಆದರೆ ಈ ವಿಷಯ ಈಗ ಹಲವಾರು ರಾಜಕೀಯ ತಿರುವು ಪಡೆದುಕೊಳ್ಳಲು ಪ್ರಾರಂಭಿಸಿದೆ. ಆರಂಭದಲ್ಲಿ ಭಾರತೀಯ ಜನತಾ ಪಕ್ಷ ಈ ಬಗ್ಗೆ ಪ್ರತಿಕ್ರಿಯೆ ನೀಡಿತ್ತು. ಈಗ ಕಾಂಗ್ರೆಸ್ ಕೂಡ ಈ ಬಗ್ಗೆ ಹೇಳಿಕೆ ನೀಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಮನೀಶ್ ತಿವಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದು, ಭಾರತೀಯ ರೂಪಾಯಿಗಳ ಹೊಸ ಸರಣಿಯಲ್ಲಿ ಮಹಾತ್ಮ ಗಾಂಧಿಯವರ ಚಿತ್ರದ ಜೊತೆಗೆ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಫೋಟೋ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಇದಕ್ಕೂ ಮುನ್ನ ಕೇಜ್ರಿವಾಲ್ ಹೇಳಿಕೆಯ ಬಗ್ಗೆ ಬಿಜೆಪಿ ಮಾತನಾಡಿತ್ತು. ಕೇಜ್ರಿವಾಲ್ ಅವರ ಹೇಳಿಕೆ ಅವರ ಯೂ ಟರ್ನ್ ವ್ಯಕ್ತಿತ್ವದ ಉತ್ತುಂಗವಾಗಿದೆ ಮತ್ತು ಅವರು ತಮ್ಮನ್ನು ತಾವು ಹಿಂದೂ ಎಂದು ತೋರಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ಇದನ್ನೂ ಓದಿ: ಕೇಜ್ರಿವಾಲ್​ ಸಲಹೆ ಬೆನ್ನಲ್ಲೇ ನೋಟ್​ ಮೇಲೆ ಶಿವಾಜಿ ಚಿತ್ರ ಪ್ರಿಂಟ್​ ಮಾಡುವಂತೆ ಬಿಜೆಪಿಯ ರಾಣೆ ಹೊಸ ಸಲಹೆ

ABOUT THE AUTHOR

...view details