ಹೈದರಾಬಾದ್:ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ವಿರುದ್ಧ 45 ವರ್ಷದ ಮಹಿಳೆಯೊಬ್ಬರು ತೆಲಂಗಾಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2020ರಲ್ಲಿ ನಾರಾಯಣಪೇಟೆ ಜಿಲ್ಲೆಯಲ್ಲಿ ಆರೋಪಿ ತಮ್ಮನ್ನು ಭೇಟಿಯಾಗಿದ್ದರು. ಪ್ರೀತಿ ಮಾಡುವ ನೆಪದಲ್ಲಿ ಹತ್ತಿರವಾಗಿದ್ದ ವ್ಯಕ್ತಿ ತಮ್ಮನ್ನು ಮದುವೆಯಾಗವ ಬಯಕೆ ವ್ಯಕ್ತಪಡಿಸಿದ್ದರು ಎಂದು ದೂರಿನಲ್ಲಿ ಮಹಿಳೆ ಹೇಳಿಕೊಂಡಿದ್ದಾರೆ.
ದೂರಿನಲ್ಲಿ ಇರುವುದೇನು?:ನಿನ್ನನ್ನು ಮದುವೆ ಆಗುತ್ತೇನೆ ಎಂದು ಆರೋಪಿತ ವ್ಯಕ್ತಿ ಹೇಳಿದಾಗ ಮಹಿಳೆ ನಿಮಗೆ ಈಗಾಗಲೇ ಮದುವೆ ಆಗಿದೆಯಲ್ಲ ಎಂದು ಪ್ರಶ್ನಿಸಿದ್ದರಂತೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಹೆಂಡತಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೂರು ವರ್ಷಕ್ಕಿಂತ ಅವಳು ಹೆಚ್ಚು ಬದುಕುವುದಿಲ್ಲ, ಆಕೆಯನ್ನು ನೋಡಿಕೊಳ್ಳಲು ಒಬ್ಬರು ಬೇಕು ಎಂದು ಹೇಳಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ