ಕರ್ನಾಟಕ

karnataka

ETV Bharat / bharat

ಭಾರತ್ ಜೋಡೋ ಯಾತ್ರೆ: ಹೃದಯಾಘಾತದಿಂದ ಹಿರಿಯ ನಾಯಕ ಸಾವು - ಹೃದಯಾಘಾತದಿಂದ ಹಿರಿಯ ನಾಯಕ ಸಾವು

ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ನಾಗ್ಪುರದಿಂದ ನಾಂದೇಡ್‌ಗೆ ತೆರಳಿದ್ದ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಪಾಂಡೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Krishna Kumar Pandey  died of a heart attack Bharat Jodo Yatra
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಪಾಂಡೆ

By

Published : Nov 8, 2022, 3:58 PM IST

Updated : Nov 8, 2022, 4:10 PM IST

ನಾಗ್ಪುರ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇರಳದಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರ ಪ್ರವೇಶಿಸಿದೆ. ಯಾತ್ರೆಯ ಧ್ವಜದ ದಳ ಮುನ್ನೆಡಸಿಸುತ್ತಿರುವ ಸಂದರ್ಭದಲ್ಲಿ ಕೃಷ್ಣ ಕುಮಾರ್ ಪಾಂಡೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೂ ಆಸ್ಪತ್ರೆಗೆ ಹೋಗುವ ಮುನ್ನವೇ ದಾರಿ ಮಧ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು.

ಭಾರತ್ ಜೋಡೋ ಯಾತ್ರೆಯಲ್ಲಿದ್ದ ಕಾಂಗ್ರೆಸ್ ನಾಯಕರು ಸುದ್ದಿ ತಿಳಿದ ತಕ್ಷಣ, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಂತಿಮ ನಮನ ಸಲ್ಲಿಸಿದರು. ಮತ್ತು ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ದಿಗ್ವಿಜಯ್ ಸಿಂಗ್, ಸೇವಾದಳ ರಾಷ್ಟ್ರೀಯ ಅಧ್ಯಕ್ಷ ಲಾಲ್ಜಿ ದೇಸಾಯಿ, ಎಚ್.ಕೆ.ಪಾಟೀಲ್, ನಾನಾ ಪಟೋಲೆ, ಅಶೋಕ್ ಚವ್ಹಾಣ್, ಬಾಳಾಸಾಹೇಬ್ ಥೋರಟ್, ಸಂದೇಶ್ ಸಿಂಗಲ್ಕರ್, ಮಹೇಂದ್ರ ಸಿಂಗ್ ವೋಹ್ರಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇದನ್ನು ಓದಿ:ಹಿಂದೂ ಪದದ ವಿಚಾರವಾಗಿ ಸತೀಶ್ ಜಾರಕಿಹೊಳಿ ಹೇಳಿಕೆ ನಾವು ಖಂಡಿಸುತ್ತೇವೆ: ಸುರ್ಜೇವಾಲಾ

Last Updated : Nov 8, 2022, 4:10 PM IST

ABOUT THE AUTHOR

...view details