ಕರ್ನಾಟಕ

karnataka

ETV Bharat / bharat

ದೆಹಲಿ ಕಾಂಗ್ರೆಸ್​ ನಾಯಕಿ ಅಲ್ಕಾ ಲಾಂಬಾಗೆ ಗೃಹ ಬಂಧನ

ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಕಳೆದ ಎಂಟು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಈ ಬಾರಿ ಸಂಸತ್​ನಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ರೈತರಿಗೆ ದೆಹಲಿಯ ಜಂತರ್‌ಮಂತರ್​ನಲ್ಲಿ ಪ್ರತಿಭಟಿಸಲು ಅವಕಾಶ ನೀಡಲಾಗಿದೆ..

http://10.10.50.80:6060//finalout3/odisha-nle/thumbnail/26-July-2021/12575309_274_12575309_1627283774970.png
ಕಾಂಗ್ರೆಸ್​ ನಾಯಕಿ ಅಲ್ಕಾ ಲಂಬಾ

By

Published : Jul 26, 2021, 2:29 PM IST

Updated : Jul 26, 2021, 3:20 PM IST

ನವದೆಹಲಿ :ಚಾಂದಿನಿ ಚೌಕ್​ ಕ್ಷೇತ್ರದ ಮಾಜಿ ಶಾಸಕಿ ಮತ್ತು ಕಾಂಗ್ರೆಸ್​ ನಾಯಕಿ ಅಲ್ಕಾ ಲಾಂಬಾ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಲಾಂಬಾ ಅವರು ಜಂತರ್‌ಮಂತರ್​ನಲ್ಲಿ ಮಹಿಳಾ ಕಿಸಾನ್ ಸಂಸತ್​ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದರು.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಲಾಂಬಾ, ದೆಹಲಿ ಪೊಲೀಸರು ಟ್ಯಾನ್-ಶಾ (ಅಮಿತ್ ಶಾ) ಸೂಚನೆಯಂತೆ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದ್ದಾರೆ. ನಾನು ಜಂತರ್ ಮಂತರ್‌ನಲ್ಲಿ ನಡೆಯಲಿರುವ ಮಹಿಳಾ ಕಿಸಾನ್ ಸಂಸತ್​ನಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ನೀಡದಂತೆ ಈ ರೀತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಕಳೆದ ಎಂಟು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಈ ಬಾರಿ ಸಂಸತ್​ನಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ರೈತರಿಗೆ ದೆಹಲಿಯ ಜಂತರ್‌ಮಂತರ್​ನಲ್ಲಿ ಪ್ರತಿಭಟಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 9ರವರೆಗೆ ರೈತರಿಗೆ ಜಂತರ್‌ಮಂತರ್​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ.

Last Updated : Jul 26, 2021, 3:20 PM IST

ABOUT THE AUTHOR

...view details