ಕರ್ನಾಟಕ

karnataka

ETV Bharat / bharat

ಮೋದಿ ಸರ್ಕಾರದ ನೋಟು ಅಮಾನ್ಯೀಕರಣ: ಜನರು ಇನ್ನೂ ಉತ್ತರ ಹುಡುಕುತ್ತಲೇ ಇದ್ದಾರೆ.. ಕಾಂಗ್ರೆಸ್​ - ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್

Congress launches all out attack at Centre: ನೋಟು ಅಮಾನ್ಯೀಕರಣದ ನಂತರ ಕಪ್ಪುಹಣದ ಹಾವಳಿ ನಾಶವಾಗಿದೆಯೇ, ಭಯೋತ್ಪಾದನೆ ಸಂಬಂಧಿತ ಘಟನೆಗಳು ನಿಂತಿದೆಯೇ ಮತ್ತು ನಕಲಿ ಕರೆನ್ಸಿ ಕಡಿಮೆಯಾಗಿದೆಯೇ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

Congress launches all out attack at Centre as demonetisation completes seven years
ಮೋದಿ ಸರ್ಕಾರದ ನೋಟು ಅಮಾನ್ಯೀಕರಣಕ್ಕೆ ಉತ್ತರಗಳನ್ನು ಇನ್ನೂ ಜನತೆ ಹುಡುಕುತ್ತಿದ್ದಾರೆ: ಕಾಂಗ್ರೆಸ್​

By ETV Bharat Karnataka Team

Published : Nov 8, 2023, 6:57 PM IST

ನವದೆಹಲಿ: ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣಕ್ಕೆ ಬುಧವಾರ ಏಳು ವರ್ಷ ಆಗಿದೆ. ಈ ನೋಟು ರದ್ದು ನಿರ್ಣಯವು ದೇಶ ಆರ್ಥಿಕತೆ ಮತ್ತು ಜೀವನೋಪಾಯದ ಮೇಲೆ ಮಾಡಿದ ಅತಿ ದೊಡ್ಡ ದಾಳಿಯಾಗಿದ್ದು, ಇದನ್ನು ಜನತೆ ಇನ್ನೂ ಅನುಭಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಈ ಬುದ್ದಿಹೀನ ದೈತ್ಯ ದಾಳಿಯ ಗಾಯವನ್ನು ಭಾರತೀಯರು ಇನ್ನೂ ಶುಶ್ರೂಷೆ ಮಾಡುತ್ತಿದ್ದಾರೆ. ಲಕ್ಷಾಂತರ ಸಣ್ಣ ಉದ್ಯಮಗಳನ್ನು ಮುಚ್ಚಿಸಿದೆ. ಉದ್ಯೋಗ ನಷ್ಟ ಹಾಗೂ ಜನರ ಉಳಿತಾಯವನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಅವರು ಪೋಸ್ಟ್​ ಮಾಡಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಏಳು ವರ್ಷಗಳ ಕೆಳಗೆ ನವೆಂಬರ್ 8ರ ಆ ವಿನಾಶಕರ ರಾತ್ರಿಯಲ್ಲಿ ಭಾರತದ ಜನರು ಕೆಟ್ಟದಾಗಿ ಜರ್ಜರಿತರಾದರು ಮತ್ತು ಒಳಪೆಟ್ಟು ಅನುಭವಿಸಿದರು. ಇದಕ್ಕೆ ಇನ್ನೂ ಜನತೆ ಉತ್ತರಗಳನ್ನು ಹುಡುಕುತ್ತಿದ್ದಾರೆ. ಕೋಟ್ಯಂತರ ಜನರನ್ನು ತಮ್ಮ ಸ್ವಂತ ಹಣಕ್ಕಾಗಿ ಕಾಯುತ್ತಾ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಏಕೆ?, ನೋಟು ಅಮಾನ್ಯೀಕರಣದ ನಂತರ ಕಪ್ಪುಹಣದ ಹಾವಳಿ ನಾಶವಾಗಿದೆಯೇ, ಭಯೋತ್ಪಾದನೆ ಸಂಬಂಧಿತ ಘಟನೆಗಳು ನಿಂತಿದೆಯೇ ಮತ್ತು ನಕಲಿ ಕರೆನ್ಸಿ ಕಡಿಮೆಯಾಗಿದೆಯೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 2016ರ ಈ ಕ್ರಮವು ಉದ್ಯೋಗವನ್ನು ನಾಶಮಾಡಲು, ಕಾರ್ಮಿಕರ ಆದಾಯವನ್ನು ನಿಲ್ಲಿಸಲು, ಸಣ್ಣ ಉದ್ಯಮಗಳನ್ನು ತೊಡೆದುಹಾಕಲು, ರೈತರಿಗೆ ಹಾನಿ ಮಾಡಲು ಮತ್ತು ಅಸಂಘಟಿತ ಆರ್ಥಿಕತೆಯನ್ನು ಮುರಿಯಲು ಚೆನ್ನಾಗಿ ಯೋಚಿಸಿದ ಪಿತೂರಿಯಾಗಿದೆ. ಶೇ.1ರಷ್ಟು ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲು, ಶೇ.99ರಷ್ಟು ಸಾಮಾನ್ಯ ಭಾರತೀಯರ ಮೇಲಿನ ದಾಳಿ ಇದಾಗಿದೆ ಎಂದು ರಾಹಲ್ ​ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ನೋಟು ಅಮಾನ್ಯೀಕರಣವು ಭಾರತದ ಆರ್ಥಿಕತೆಯ ಬೆನ್ನುಮೂಳೆಯನ್ನು ಮುರಿದಿದೆ. ಇದು ಮೋದಿ ಸರ್ಕಾರದ ಅಹಂಕಾರ, ಅಮಾನವೀಯತೆ ಮತ್ತು ಆರ್ಥಿಕ ಅನಕ್ಷರತೆಯ ವಿಶಿಷ್ಟ ಸಂಯೋಜನೆಯನ್ನು ಬಿಂಬಿಸಿದೆ. ನೋಟು ಅಮಾನ್ಯೀಕರಣ ಜೊತೆಗೆ ಕೆಟ್ಟದಾಗಿ ರೂಪಿಸಿದ ಜಿಎಸ್‌ಟಿಯ ಮೂಲಕ ಭಾರತದ ಉದ್ಯೋಗ ಸೃಷ್ಟಿಯ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಕೊನೆಗೊಳಿಸಿತು. ಇದೇ 45 ವರ್ಷಗಳ ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾಯಿತು. 2013ರಲ್ಲಿ ಪ್ರಾರಂಭವಾದ ಆರ್ಥಿಕ ಚೇತರಿಕೆಯನ್ನು ಕೊನೆಗೊಳಿಸಿತು ಎಂದು ದೂರಿದ್ದಾರೆ.

ನೋಟು ಅಮಾನ್ಯೀಕರಣವು ಒಂದು ಪ್ರಮಾದವಾಗಿದ್ದು, ಕಪ್ಪುಹಣದ ಹರಡುವಿಕೆಯನ್ನು ಕಡಿಮೆ ಮಾಡುವುದು, ಖೋಟಾನೋಟುಗಳನ್ನು ಕೊನೆಗೊಳಿಸುವುದು ಅಥವಾ ಭಾರತವನ್ನು ನಗದುರಹಿತವನ್ನಾಗಿ ಮಾಡುವ ಕುರಿತ ಮೋದಿ ಸರ್ಕಾರದ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾಗಿದೆ ಎಂದು ಜೈರಾಮ್ ರಮೇಶ್ ಬರೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಕೂಡ ಇದೇ ವಿಷಯದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಚಿಂದಿ ಆಯುವವನಿಗೆ ಸಿಕ್ತು 23ಲಕ್ಷ ಮೌಲ್ಯದ ಯುಎಸ್ ಡಾಲರ್: ಪೊಲೀಸರು ಹೇಳಿದ್ದೇನು?

For All Latest Updates

ABOUT THE AUTHOR

...view details