ತೇಜ್ಪುರ್(ಅಸ್ಸೋಂ): ಮುಂಬರುವ ಅಸ್ಸೋಂ ಚುನಾವಣೆ ಗೆಲ್ಲಲು ಭಾರೀ ಯೋಜನೆ ರೂಪಿಸಿಕೊಂಡಿರುವ ಕಾಂಗ್ರೆಸ್ ಇದೀಗ ಭರ್ಜರಿ ಕೊಡುಗೆ ಘೋಷಿಸಿದೆ. ಅಸ್ಸೋಂ ರಾಜ್ಯದ ಗೃಹಿಣಿಯರಿಗೆ ಗ್ರಹಿನಿ ಸಮ್ಮಾನ್ ಮೂಲಕ ತಿಂಗಳಿಗೆ 2 ಸಾವಿರ ರೂ., ಚಹಾ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ದಿನಕ್ಕೆ 365 ರೂ ಜತೆಗೆ 5 ಲಕ್ಷ ಹೊಸ ಸರ್ಕಾರಿ ಉದ್ಯೋಗ ರಚಿಸುವ ಭರವಸೆಯನ್ನು ಕೈ ಪಕ್ಷ ಕೊಟ್ಟಿದೆ.
ತೇಜ್ಪುರದಲ್ಲಿ ಪ್ರಚಾರ ಸಭೆ ನಡೆಸಿದ ಪ್ರಿಯಾಂಕಾ ಗಾಂಧಿ ಈ ಘೋಷಣೆ ಮಾಡಿದ್ದಾರೆ. ಕಳೆದೆರಡು ದಿನಗಳಿಂದಲೂ ರಾಜ್ಯದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಅವರು ಇಂದು ಬೆಳಗ್ಗೆ ಟೀ ಎಸ್ಟೇಟ್ನಲ್ಲಿ ಕೆಲಸ ಮಾಡಿದ್ದ ವಿಡಿಯೋ ಕೂಡ ವೈರಲ್ ಅಗಿತ್ತು.