ಕರ್ನಾಟಕ

karnataka

ETV Bharat / bharat

ರಾಯ್‌ಬರೇಲಿಯಲ್ಲಿ ‘ಕೈ’ ನಾಯಕರ ಕಡೆಗಣನೆ.. ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ತಂತ್ರ..

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯರಲ್ಲದವರಿಗೂ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನೀಡಲಾಗುತ್ತಿದೆ. ಪಕ್ಷದಲ್ಲಿರುವ ಸದ್ಯದ ಸ್ಥಿತಿಗತಿಗಳನ್ನು ಹೈಕಮಾಂಡ್​ಗೆ ತಿಳಿಸಲು ಯತ್ನಿಸಿದ್ರೆ, ಅವರನ್ನು ಪಕ್ಷದಿಂದಲೇ ಹೊರ ಹಾಕಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸುಮಾರು 35 ಕಾರ್ಯಕರ್ತರನ್ನು ಉಚ್ಚಾಟಿಸಲಾಗಿದೆ..

BJP closes
BJP closes

By

Published : Feb 5, 2021, 1:25 PM IST

ರಾಯ್ ಬರೇಲಿ (ಉತ್ತರ ಪ್ರದೇಶ): ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿರುವ ಏಕೈಕ ಲೋಕಸಭಾ ಕ್ಷೇತ್ರ ರಾಯ್ ಬರೇಲಿಯಲ್ಲೂ ಈಗ ಅಸಮಾಧಾನದ ಹೊಗೆಯಾಡುತ್ತಿದೆ. ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿ, ಹೊಸಬರಿಗೆ ಮಣೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಕಾಂಗ್ರೆಸ್ ಮುಖಂಡ ಅನುಜ್ ಕುಮಾರ್ ಸಿಂಗ್ ಮಾತನಾಡಿ, ಪಕ್ಷಕ್ಕಾಗಿ ನಾವು ಹಗಲಿರುಳು ದುಡಿಯುತ್ತಿದ್ದೇವೆ. ಆದರೆ, ನಮ್ಮನ್ನೇ ನಿರ್ಲಕ್ಷ್ಯಿಸಲಾಗುತ್ತಿದೆ. ಇಂದಿರಾ, ರಾಜೀವ್​​ ಗಾಂಧಿ ಕಾಲದಲ್ಲಿದ್ದ ನಾಯಕರೆಲ್ಲ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಅರಿವಿಲ್ಲದವರೆಲ್ಲ ಪಕ್ಷದಲ್ಲಿ ಆಳ್ವಿಕೆ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಪಕ್ಷದ ಮಾಜಿ ಕಾರ್ಯದರ್ಶಿ ಶಿವಕುಮಾರ್ ಪಾಂಡೆ ಮಾತನಾಡಿ, ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯರಲ್ಲದವರಿಗೂ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನೀಡಲಾಗುತ್ತಿದೆ. ಪಕ್ಷದಲ್ಲಿರುವ ಸದ್ಯದ ಸ್ಥಿತಿಗತಿಗಳನ್ನು ಹೈಕಮಾಂಡ್​ಗೆ ತಿಳಿಸಲು ಯತ್ನಿಸಿದ್ರೆ, ಅವರನ್ನು ಪಕ್ಷದಿಂದಲೇ ಹೊರ ಹಾಕಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸುಮಾರು 35 ಕಾರ್ಯಕರ್ತರನ್ನು ಉಚ್ಚಾಟಿಸಲಾಗಿದೆ ಎಂದರು.

ಈಗಾಗಲೇ ಕಾಂಗ್ರೆಸ್ ಶಾಸಕರಾದ ಅದಿತಿ ಸಿಂಗ್ ಮತ್ತು ರಾಕೇಶ್ ಸಿಂಗ್ ಪಕ್ಷದ ವಿರುದ್ಧವೇ ದಂಗೆ ಎದ್ದಿದ್ದು, ಬಿಜೆಪಿಗೆ ಸೇರಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ ಸೋನಿಯಾ ಗಾಂಧಿ ಸ್ವಕ್ಷೇತ್ರ ರಾಯ್ ಬರೇಲಿ ಮೇಲೆಯೇ ಬಿಜೆಪಿ ಕಣ್ಣಿಟ್ಟಿದೆ. ಕೇಂದ್ರ ಸಚಿವರು, ಹಿರಿಯ ನಾಯಕರು ಕ್ಷೇತ್ರಕ್ಕೆ ಬರುತ್ತಿದ್ದು, ಕಾಂಗ್ರೆಸ್ ಭದ್ರಕೋಟೆ ವಶಪಡಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಗೆದ್ದಿರುವ ಕ್ಷೇತ್ರಗಳಿಗಿಂತ ಸೋತಿರುವ ಕ್ಷೇತ್ರದಲ್ಲಿಯೇ ಹೆಚ್ಚು ಕೆಲಸ ಮಾಡುತ್ತದೆ. 2014 ರಿಂದ 2019ರವರೆಗೆ ಬಿಜೆಪಿ ಮಾಡಿದ್ದೂ ಅದೇ ತಂತ್ರಗಾರಿಕೆ. ಕಳೆದ ಬಾರಿ ಅಮೇಥಿ ಗೆದ್ದಿದ್ದೇವೆ. ಮುಂದಿನ ಸಲ ರಾಯ್‌ಬರೇಲಿಯನ್ನೂ ಗೆಲ್ಲುತ್ತೇವೆ ಎಂದು ಬಿಜೆಪಿ ಉಪಾಧ್ಯಕ್ಷ ವಿಜಯ್ ಪಾಠಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details