ಕರ್ನಾಟಕ

karnataka

ETV Bharat / bharat

ಜಮಾಲ್‌ಪುರ ಖಾಡಿಯಾದಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್​ ಅಭ್ಯರ್ಥಿ - Jamalpur Khadia Assembly Result

ಈ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಯಾ-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಪ್ರಬಲ ಸ್ಪರ್ಧೆ ನಡುವೆ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆಲುವು ಸಾಧಿಸಿದ್ದಾರೆ.

ಜಮಾಲ್‌ಪುರ ಖಾಡಿಯಾದಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್​ ಅಭ್ಯರ್ಥಿ
congress-candidate-victory-in-jamalpur-khadia

By

Published : Dec 8, 2022, 1:34 PM IST

ಅಹಮದಾಬಾದ್: ಅಹಮದಾಬಾದ್ ನಗರದ ಮುಸ್ಲಿಂ ಪ್ರಾಬಲ್ಯದ ಜಮಾಲ್‌ಪುರ ಖಾಡಿಯಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಖೇದವಾಲಾ ಗೆಲುವು ಸಾಧಿಸಿದ್ದಾರೆ. ಅವರು ಐಎನ್​ಡಿ ಅಭ್ಯರ್ಥಿ ಮೆಹಬೂಬ್ ಮೊಹಮ್ಮದ್ ಭಾಯ್ ರಂಗ್ರೇಜ್ ಅವರನ್ನು ಸೋಲಿಸಿದ್ದು, ಬಿಜೆಪಿ ಭೂಷಣ್ ಭಟ್ ಭಾರೀ ಹಿನ್ನಡೆ ಸಾಧಿಸಿದ್ದಾರೆ

ಕಾಂಗ್ರೆಸ್​ನ ಇಮ್ರಾನ್ ಖೇದವಾಲಾ 2017 ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ಈ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಯಾ-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಎಐಎಂಐ ಮತ್ತು ಆಮ್ ಆದ್ಮಿ ಪಕ್ಷವನ್ನು ಭಾರತೀಯ ಜನತಾ ಪಕ್ಷದ ಬಿ-ಟೀಮ್ ಎಂದು ಚುನಾವಣಾ ಪ್ರಚಾರದಲ್ಲಿ ಟೀಕಿಸಿದ್ದರು.

ಇದನ್ನೂ ಓದಿ: ಗುಜರಾತ್​​ನಲ್ಲಿ ಮತ್ತೆ ಕಮಲ ಕಮಾಲ್: ಸೌರಾಷ್ಟ್ರದಲ್ಲಿ ಖಾತೆ ತೆರೆದ ಆಮ್ ಆದ್ಮಿ, ಕಾಂಗ್ರೆಸ್ ಗೆ ಹಿನ್ನಡೆ

ABOUT THE AUTHOR

...view details