ಚಂಬಾ:ಹಿಮಾಚಲ ಪ್ರದೇಶ ವಿಧಾನಸಭಾ ಉಪಸಭಾಧ್ಯಕ್ಷ ಹಂಸರಾಜ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಉಪಸಭಾಧ್ಯಕ್ಷ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ.
ವಿಧಾನಸಭೆಯ ಉಪಸಭಾಧ್ಯಕ್ಷ ಹಂಸರಾಜ್ ದಿಢೀರ್ ತಪಾಸಣೆಗಾಗಿ ಚಂಬಾದ ರೈಲಾ ಗ್ರಾಮದ ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ತರಗತಿಯೊಂದಕ್ಕೆ ಭೇಟಿ ನೀಡಿದ ಡೆಪ್ಯುಟಿ ಸ್ಪೀಕರ್ ವಿದ್ಯಾರ್ಥಿಗಳಿಗೆ ಕೋವಿಡ್ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆದ್ರೆ ವಿದ್ಯಾರ್ಥಿಯೊಬ್ಬ ನಗುತ್ತಿದ್ದನು. ಹಂಸರಾಜ್ ಆ ವಿದ್ಯಾರ್ಥಿಗೆ ಯಾಕೆ ನಗುತ್ತಿದ್ದೀಯ ಎಂದು ಹೇಳಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ರೂ ಸಹ ಸ್ಪಷ್ಟವಾಗಿ ಕಾಣುತ್ತಿಲ್ಲ.