ಕರ್ನಾಟಕ

karnataka

ETV Bharat / bharat

'ಪ್ರತಿ ನಿಮಿಷವೂ ಅಮೂಲ್ಯ...' ನವೀನ್ ಸಾವಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ಕಾಂಗ್ರೆಸ್, ಎಎಪಿ ವಾಗ್ದಾಳಿ - Indian Student Killed

ಉಕ್ರೇನ್​​ನಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಪಕ್ಷಗಳ ಮುಖಂಡರು ವಾಗ್ದಾಳಿ ನಡೆಸಿದ್ದು, ಭಾರತೀಯರ ರಕ್ಷಣೆಗೆ ಪ್ರತಿ ನಿಮಿಷವೂ ಅಮೂಲ್ಯವಾಗಿದೆ ಎಂದಿದ್ದಾರೆ.

Indian student death in ukraine
Indian student death in ukraine

By

Published : Mar 1, 2022, 5:28 PM IST

ನವದೆಹಲಿ:ರಷ್ಯಾ-ಉಕ್ರೇನ್​ ನಡುವಿನ ಮಿಲಿಟರಿ ಸಂಘರ್ಷದಲ್ಲಿ ಕರ್ನಾಟಕದ ಹಾವೇರಿಯ ವಿದ್ಯಾರ್ಥಿ ನವೀನ್​​(21) ಸಾವನ್ನಪ್ಪಿದ್ದಾನೆ. ಇದೇ ವಿಷಯವನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳು ಹರಿಹಾಯ್ದಿವೆ.

ಉಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಲು ಆರಂಭಿಸುತ್ತಿದ್ದಂತೆ ಅಲ್ಲಿ ವ್ಯಾಸಂಗ ಮಾಡ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನ ಮುಂದುವರೆದಿದೆ. ಇದರ ಮಧ್ಯೆ ಇಂದು ಬೆಳಗ್ಗೆ ಖಾರ್ಕಿವ್​​ನಲ್ಲಿ ನಡೆದ ಶೆಲ್​ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ, ಉಕ್ರೇನ್​​ನಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತವಾಗಿದೆ. ಅಲ್ಲಿರುವ ಭಾರತೀಯರ ರಕ್ಷಣೆಗೆ ಪ್ರತಿ ನಿಮಿಷವೂ ಅಮೂಲ್ಯವಾಗಿದೆ. ಭಾರತೀಯರನ್ನು ವಾಪಸ್ ಕರೆತರುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದಿದ್ದಾರೆ.

ಇನ್ನೋರ್ವ ಕಾಂಗ್ರೆಸ್‌ ನಾಯಕ ರಂದೀಪ್ ಸುರ್ಜೇವಾಲ್​ ಟ್ವೀಟ್‌ ಮಾಡಿ, ಮೋದಿಜೀ ನಿಮ್ಮ ಸರ್ಕಾರದ ಅಸೂಕ್ಷ್ಮತೆಯಿಂದಾಗಿ ಮಗುವನ್ನು ಕಳೆದುಕೊಂಡಿರುವ ಕರ್ನಾಟಕದ ಕುಟುಂಬಕ್ಕೆ ಏನು ಹೇಳುತ್ತೀರಿ? ಉಕ್ರೇನ್​​ ರಷ್ಯಾ ಯುದ್ಧದ ಮಧ್ಯೆ ಅಲ್ಲಿರುವ 20 ಸಾವಿರ ಭಾರತೀಯರ ಜೀವ ಅಪಾಯದಲ್ಲಿದೆ. ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ಯಾರದ್ದು? ಎಂದು ಕೇಳಿದ್ದಾರೆ.

ಆಮ್‌ ಆದ್ಮಿ ಪಕ್ಷ ಟ್ವೀಟ್ ಮಾಡಿದ್ದು, ಉಕ್ರೇನ್​​ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಾಣ ರಕ್ಷಣೆ ಮಾಡುವಂತೆ ಮನವಿ ಮಾಡ್ತಿದ್ದು,ಪ್ರಧಾನಿ ಮೋದಿ ಮಾತ್ರ ಚುನಾವಣೆ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ ಎಂದು ಟೀಕೆ ಮಾಡಿದೆ.

ಇದನ್ನೂ ಓದಿ:ಉಕ್ರೇನ್​​ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು.. ನವೀನ್​ ಮೃತದೇಹ ಭಾರತಕ್ಕೆ ತರಿಸಿಕೊಳ್ಳಲು ಪ್ರಯತ್ನ: ಸಿಎಂ

ABOUT THE AUTHOR

...view details