ಕರ್ನಾಟಕ

karnataka

ETV Bharat / bharat

ವಿದ್ಯುನ್ಮಾನ ಮತಯಂತ್ರದ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್​, ಆಪ್ ಮತ್ತೆ​ ಅಪಸ್ವರ - AAP

ಇವಿಎಂ ಯಂತ್ರಗಳ ಬಗ್ಗೆ ವಿಪಕ್ಷಗಳಾದ ಕಾಂಗ್ರೆಸ್​, ಆಪ್​ ಪದೇ ಪದೇ ಅನುಮಾನ ವ್ಯಕ್ತಪಡಿಸುತ್ತಿವೆ.

ಚುನಾವಣಾ ಆಯೋಗ
ಚುನಾವಣಾ ಆಯೋಗ

By ETV Bharat Karnataka Team

Published : Dec 31, 2023, 2:07 PM IST

Updated : Dec 31, 2023, 3:11 PM IST

ನವದೆಹಲಿ:ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬಗ್ಗೆ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷ (ಆಪ್​) ಮತ್ತೆ ಅನುಮಾನ ವ್ಯಕ್ತಪಡಿಸಿದೆ. ಮಧ್ಯಪ್ರದೇಶ ಚುನಾವಣೆಯ ಸೋಲಿನ ಬಳಿಕ ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸಿದ್ದ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ ಅವರು ಇದೀಗ ಮತ್ತೆ ಶಂಕೆ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗವು ಇವಿಎಂಗಳ ದುರುಪಯೋಗ ಮತ್ತು ಈ ಹಿಂದಿನ ಮತಪತ್ರಗಳ ಮತದಾನದ ಬಗ್ಗೆ ವಿರೋಧ ಪಕ್ಷಗಳ ಜೊತೆ ಚರ್ಚಿಸಲು ಮುಂದಾಗುತ್ತಿಲ್ಲ. ಅದರ ಉನ್ನತಾಧಿಕಾರಿಗಳು ಮಾತುಕತೆಗೆ ಅವಕಾಶ ನೀಡುತ್ತಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆಮ್​​ ಆದ್ಮಿ ಪಕ್ಷ (ಆಪ್​), ಇಂಡಿಯಾ ಕೂಟವು ಚುನಾವಣಾ ಆಯೋಗದ ಉನ್ನತಾಧಿಕಾರಿಗಳ ಜೊತೆ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೋರಿದೆ. ಆದರೆ, ಆಯೋಗವು ವಿರೋಧ ಪಕ್ಷಗಳ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಅದರ ಅಧಿಕಾರಿಗಳು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ವಿಪಕ್ಷಗಳ ನಾಯಕರನ್ನು ಭೇಟಿ ಮಾಡುವಷ್ಟು ಅವರಲ್ಲಿ ಸಮಯವಿಲ್ಲ. ಸುಪ್ರೀಂ ಕೋರ್ಟ್​ನ ಮುಖ್ಯ ನಾಯಮೂರ್ತಿಗಳೇ ಇತ್ತ ಗಮನಹರಿಸಬೇಕು. ಆಯೋಗ ತನ್ನ ನಿರ್ಧಾರವನ್ನು ನೀಡಿದೆ. ಆದರೆ, ವಿಪಕ್ಷಗಳ ಮಾತಿಗೇಕೆ ಕಿವಿಗೊಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಾನ್ಯತೆ ಪಡೆದ ಪಕ್ಷಗಳು ಇವಿಎಂ ಬಗ್ಗೆ ಏನನ್ನೂ ಪ್ರಶ್ನಿಸಬಾರದೇ?. ಅಂತಹ ಹಕ್ಕೇ ನಮಗಿಲ್ಲವೇ? ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳು ಇದನ್ನು ಗಮನಿಸುತ್ತಾರೆಯೇ ಎಂದು ಕೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಪ್ರಶಾಂತ್ ಭೂಷಣ್ ಅವರು ಇವಿಎಂಗಳ ಮೂಲಕ ಚುನಾವಣೆ ನಡೆಸುವ ಬಗ್ಗೆ ಭಾನುವಾರ ಶಂಕೆ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಇವಿಎಂಗಳನ್ನು ಹೇಗೆ ಸುಲಭವಾಗಿ ಟ್ಯಾಂಪರಿಂಗ್ ಮಾಡಬಹುದು ಎಂಬುದನ್ನು ಮಿಚಿಗನ್ ವಿಶ್ವವಿದ್ಯಾಲಯದ ಪ್ರೊಫೆಸರ್ ವಿವರಿಸಿದ್ದಾರೆ. ಅವು ಸುರಕ್ಷಿತವಾಗಿಲ್ಲ. ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡುತ್ತವೆ. ಹೆಚ್ಚಿನ ದೇಶಗಳು ಇವಿಎಂಗಳ ಬಳಕೆಯನ್ನು ನಿಲ್ಲಿಸಿವೆ. ಭಾರತೀಯ ಚುನಾವಣಾ ಆಯೋಗ ಇವುಗಳಲ್ಲಿನ ಹಾರ್ಡ್‌ವೇರ್/ಸಾಫ್ಟ್‌ವೇರ್ ಅನ್ನು ತೋರಿಸಲು ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ವಿಪಕ್ಷಗಳು ರಚಿಸಿಕೊಂಡಿರುವ INDIA ಕೂಟದ ನಾಲ್ಕನೇ ಸಭೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಅನುಮಾನಗಳಿವೆ ಎಂಬ ನಿರ್ಣಯವನ್ನು ಅಂಗೀಕರಿಸಿವೆ. ಹೀಗಾಗಿ ಚುನಾವಣೆಗಳಲ್ಲಿ ಬ್ಯಾಲೆಟ್​ ಪೇಪರ್​ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಬೇಡಿಕೆ ಮಂಡಿಸುತ್ತಿವೆ.

ಮತ ಪರಿಶೀಲನೆಗೆ ಅವಕಾಶ:ಮತ ಹಾಕಿದ ಬಳಿಕ ಅದರ ಚೀಟಿ ವಿವಿಪ್ಯಾಟ್ ಬಾಕ್ಸ್‌ನಲ್ಲಿ ಬೀಳುವ ಬದಲು ಮತದಾರರಿಗೆ ಅದು ಗೋಚರವಾಗುವಂತಿರಬೇಕು. ನಂತರ ಅವರು ಅದನ್ನು ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಹಾಕುವ ಅವಕಾಶ ಇರಬೇಕು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ, ಚುನಾವಣಾ ಆಯೋಗ ಸುಪ್ರೀಂಕೋರ್ಟ್​ಗೆ ಇವಿಎಂಗಳ ಕಾರ್ಯದಕ್ಷತೆಯ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ ಯಾವುದೇ ದೋಷಗಳಿಲ್ಲ ಎಂಬುದನ್ನು ಒತ್ತಿ ಹೇಳಿದೆ.

ಇದನ್ನೂ ಓದಿ:ಇವಿಎಂ ಸೋರ್ಸ್​ ಕೋಡ್​ ಆಡಿಟ್​ ಕೋರಿದ್ದ ಪಿಐಎಲ್​ ವಜಾ

Last Updated : Dec 31, 2023, 3:11 PM IST

ABOUT THE AUTHOR

...view details