ಕರ್ನಾಟಕ

karnataka

By

Published : Sep 29, 2022, 3:41 PM IST

Updated : Sep 29, 2022, 3:53 PM IST

ETV Bharat / bharat

ಕಾಂಗ್ರೆಸ್​ ಅಧ್ಯಕ್ಷ ರೇಸ್​ನಿಂದ ಗೆಹ್ಲೋಟ್ ಔಟ್​: ಶಶಿ ತರೂರ್​ - ದಿಗ್ವಿಜಯ್​ ಸಿಂಗ್ ಮಧ್ಯೆ​ ಫೈಟ್​

ಕಾಂಗ್ರೆಸ್​ ಅಧ್ಯಕ್ಷ ಚುನಾವಣೆಯ ಸ್ಪರ್ಧೆಯಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಹಿಂದೆ ಸರಿದಿದ್ದು, ಶಶಿ ತರೂರ್​ ಮತ್ತು ದಿಗ್ವಿಜಯ್​ ಸಿಂಗ್​ ಮಧ್ಯೆ ಫೈಟ್​ ನಡೆಯಲಿದೆ.

cong-prez-polls
ಕಾಂಗ್ರೆಸ್​ ಅಧ್ಯಕ್ಷ ರೇಸ್​ನಿಂದ ಗೆಹ್ಲೋಟ್ ಔಟ್

ನವದೆಹಲಿ:ಭಾರೀ ಗೊಂದಲ ಮೂಡಿಸಿದ್ದ ಕಾಂಗ್ರೆಸ್​ ಅಧ್ಯಕ್ಷರ ಚುನಾವಣೆ ಕೊನೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ರೇಸ್​ನಿಂದ ಹೊರಬೀಳುವ ಮೂಲಕ ಹಿರಿಯ ನಾಯಕರಾದ ಶಶಿ ತರೂರ್​ ಮತ್ತು ದಿಗ್ವಿಜಯ ಸಿಂಗ್​ ಮಧ್ಯೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಟ್​ ನಡೆಯಲಿದೆ.

ರಾಜಸ್ಥಾನ ಮುಖ್ಯಮಂತ್ರಿಯಾಗಿರುವ ಅಶೋಕ್​ ಗೆಹ್ಲೋಟ್​ರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಸೋನಿಯಾ ಗಾಂಧಿ ಅವರೇ ಸೂಚಿಸಿದ್ದರು. ಇಡೀ ಗಾಂಧಿ ಕುಟುಂಬ ಕೂಡ ಬೆಂಬಲ ನೀಡಿತ್ತು. ಬಳಿಕ ನಡೆದ ಹೈಡ್ರಾಮಾದಿಂದ ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಇದೀಗ ಗೆಹ್ಲೋಟ್​ ಅವರೇ ಅಧಿಕೃತವಾಗಿ ತಾವು ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

"ರಾಜಸ್ಥಾನದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ರಾಜ್ಯದಲ್ಲಿ ನಡೆದ ಘಟನೆಗಳಿಂದ ನನಗೆ ತೀವ್ರ ನೋವಾಗಿದೆ. ಈ ನೋವನ್ನು ನನ್ನ ಜೀವನದ ಉದ್ದಕ್ಕೂ ನಾನು ಅನುಭವಿಸುತ್ತೇನೆ" ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ಅಶೋಕ್​ ಗೆಹ್ಲೋಟ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ರಾಜಸ್ಥಾನದಲ್ಲಿ ಕೆಲ ಶಾಸಕರು, ಮಂತ್ರಿಗಳು ಬಂಡಾಯ ಎದ್ದಿದ್ದರು. ಇದು ನನ್ನನ್ನು ಘಾಸಿಗೊಳಿಸಿದೆ. ನಾನು ಬಂಡಾಯದಿಂದ ದೂರವಿದ್ದರೂ ಸಹ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು.

ಅಶೋಕ್​ ಗೆಹ್ಲೋಟ್ ಸ್ಪರ್ಧಾ ಕಣದಿಂದ ಹೊರಬೀಳುವ ಮೂಲಕ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿ ಈಗ ಹಿರಿಯ ಕಾಂಗ್ರೆಸ್ ನಾಯಕರಾದ ​ಶಶಿ ತರೂರ್ ಮತ್ತು ದಿಗ್ವಿಜಯ್ ಸಿಂಗ್ ಅವರು ಮಾತ್ರ ಉಳಿದುಕೊಂಡಿದ್ದಾರೆ. 2 ದಶಕಗಳ ಬಳಿಕ ಗಾಂಧಿಯೇತರ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ತರೂರ್​ ಮತ್ತು ದಿಗ್ವಿಜಯ್​ ಸಿಂಗ್​ ಮಧ್ಯೆ ನಡೆಯಲಿದೆ.

ಗೆಹ್ಲೋಟ್​ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಬಳಿಕ, ಶಶಿ ತರೂರ್​ ಅವರು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾದರು. ಬಳಿಕ ಈ ಬಗ್ಗೆ ಟ್ವೀಟ್​ ಮಾಡಿರುವ ತರೂರ್​, "ಇಂದು ಮಧ್ಯಾಹ್ನ ದಿಗ್ವಜಯ್​ ಸಿಂಗ್​ರನ್ನು ಭೇಟಿ ಮಾಡಿದೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮದು ಪ್ರತಿಸ್ಪರ್ಧಿಗಳ ನಡುವೆ ನಡೆಯುವಂತಹ ಯುದ್ಧವಲ್ಲ. ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಅಷ್ಟೇ ಎಂಬುದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ನಮ್ಮಿಬ್ಬರ ನಡುವೆ ಯಾರೇ ಗೆದ್ದರೂ ಅದು ಭಾರತ ಗೆಲುವಾಗಲಿದೆ" ಎಂದು ತರೂರ್ ಅವರು ಇಬ್ಬರು ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಓದಿ:80 ಲಕ್ಷ ಕೊಟ್ಟು ರೇಪ್ ಕೇಸ್ ರಾಜಿ ಮಾಡಿಕೊಂಡ ಕೇರಳ ಸಿಪಿಐಎಂ ಮುಖಂಡನ ಪುತ್ರ!

Last Updated : Sep 29, 2022, 3:53 PM IST

ABOUT THE AUTHOR

...view details