ಕರ್ನಾಟಕ

karnataka

ನಿಕ್ಕಿ ಯಾದವ್ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢ... ತಂದೆಯಿಂದ ಮರಣದಂಡನೆಗೆ ಒತ್ತಾಯ

By

Published : Feb 15, 2023, 9:02 PM IST

ಬಾಬಾ ಹರಿದಾಸ್ ನಗರ ಕೊಲೆ ಪ್ರಕರಣದ ಹಿನ್ನೆಲೆ ನಿಕ್ಕಿ ಮೃತದೇಹದ ಮರಣೋತ್ತರ ಪರೀಕ್ಷೆಯು ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಸುಮಾರು ಮೂರು ಗಂಟೆಗಳವರೆಗೆ ನಡೆಯಿತು. ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ದೇಹದ ಇತರ ಭಾಗಗಳಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

Nikki Yadav Murder Case
ನಿಕ್ಕಿ ಮೃತದೇಹದ ಮರಣೋತ್ತರ ಪರೀಕ್ಷೆಯು ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಡೆಯಿತು.

ನವದೆಹಲಿ:ಶ್ರದ್ಧಾ ವಾಕರ್‌ ಹತ್ಯೆಯನ್ನು ನೆನಪಿಸುವಂತಹ ಮತ್ತೊಂದು ಪ್ರಕರಣ ನಿನ್ನೆ ರಾಷ್ಟ್ರ ರಾಜಧಾನಿಯಿಂದ ವರದಿಯಾಗಿತ್ತು. ಹೌದು, ಪಶ್ಚಿಮ ದೆಹಲಿಯ ಬಾಬಾ ಹರಿದಾಸ್‌ ನಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕ್ಕಿ ಯಾದವ್‌ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬುಧವಾರ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮಾಡಲಾಯಿತು. ಸುಮಾರು ಮೂರು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಯಿತು. ಬಳಿಕ ನಿಕ್ಕಿ ಕುಟುಂಬ ಸದಸ್ಯರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಯಿತು. ಅಧಿಕೃತ ಮೂಲಗಳ ಪ್ರಕಾರ, ನಿಕ್ಕಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಆದರೆ, ಅಧಿಕೃತವಾಗಿ ವರದಿ ಮಾತ್ರ ಬಹಿರಂಗವಾಗಿಲ್ಲ.

ಪೋಷಕರಿಂದ ಪೊಲೀಸರಿಗೆ ದೂರು: ನಿಕ್ಕಿ ಅವರ ಸಹೋದರ ಮತ್ತು ಚಿಕ್ಕಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ, ನಿಕ್ಕಿ ಮನೆಗೆ ಪ್ರತಿದಿನ ಕರೆಗಳು ಬರುತ್ತಿದ್ದವು. ಆದರೆ, ಗುರುವಾರದ ನಂತರ ಕರೆಗಳು ಬರುವುದು ನಿಂತು ಹೋಯಿತು. ನಂತರ ಪೋಷಕರು ನಿಕ್ಕಿಯನ್ನು ಹುಡುಕಲು ಪ್ರಾರಂಭಿಸಿದರು. ಕುಟುಂಬ ಸದಸ್ಯರು ನಿಕ್ಕಿಯ ಫೋನ್‌ಗೆ ಕರೆ ಮಾಡಿದಾಗ, ಸಾಹಿಲ್ ಫೋನ್ ತೆಗೆದುಕೊಂಡು ನಿಕ್ಕಿ ಪ್ರವಾಸಕ್ಕೆ ಹೋಗಿದ್ದಾರೆ.

ಅವಳ ಮೊಬೈಲ್ ಫೋನ್ ತನ್ನ ಬಳಿ ಇದೆ ಎಂದು ಹೇಳುತ್ತಿದ್ದನು. ಎರಡು ದಿನ ನಿಕ್ಕಿಯನ್ನು ಮಾತನಾಡಿಸಲು ಸಾಧ್ಯವಾಗದಿದ್ದಾಗ ಕುಟುಂಬಸ್ಥರಿಗೆ ಅನುಮಾನ ಬಂದಿತ್ತು. ಭಾನುವಾರ, ನಿಕ್ಕಿಯನ್ನು ಹುಡುಕುತ್ತಾ, ಅವರು ಉತ್ತಮ್ ನಗರದಲ್ಲಿರುವ ಆಕೆಯ ಬಾಡಿಗೆ ಮನೆಗೆ ತಲುಪಿದರು. ಅಲ್ಲಿಂದ ಯಾವುದೇ ಕುರುಹು ಸಿಗಲಿಲ್ಲ. ನಂತರ ಅವಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗೆ ಮರಣ ದಂಡನೆ ವಿಧಿಸಿ:ಸಾಹಿಲ್ ಬಗ್ಗೆ ಮನೆಯವರಿಗೆ ಗೊತ್ತಿರಲಿಲ್ಲ ಎನ್ನುತ್ತಾರೆ ನಿಕ್ಕಿಯ ಚಿಕ್ಕಪ್ಪ. ಅವರ ಪ್ರಕಾರ ಇಂಗ್ಲಿಷ್​ನಲ್ಲಿ ಎಂಎ ಮಾಡುತ್ತಿರುವ ನಿಕ್ಕಿಗೆ ಪಿಎಚ್​ಡಿ ಮಾಡುವ ಆಸೆ ಇತ್ತು. ನಿಕ್ಕಿ ಹತ್ಯೆಯನ್ನು ಯಾವ ರೀತಿಯಲ್ಲಿ ನಡೆಸಲಾಗಿದೆಯೋ ಅದೇ ರೀತಿ ಆರೋಪಿ ಸಾಹಿಲ್‌ಗೂ ಕಠಿಣ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಜೊತೆಗೆ ನಿಕ್ಕಿ ತಂದೆಯು ಕೂಡಾ ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಗೋವಾಕ್ಕೆ ಹೋಗುವ ಯೋಜನೆ ಇತ್ತು: ಸಾಹಿಲ್ ಬಗ್ಗೆ ಮನೆಯವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಘಟನೆಯ ನಂತರವೇ ಸಾಹಿಲ್ ಬಗ್ಗೆ ತಿಳಿದು ಬಂದಿದೆ ಎಂದು ನಿಕ್ಕಿ ಸಹೋದರ ಜಗದೀಶ್ ಹೇಳುತ್ತಾರೆ. ಇದರೊಂದಿಗೆ, ನಿಕ್ಕಿ ಮತ್ತು ಸಾಹಿಲ್ ಗೋವಾಕ್ಕೆ ಹೋಗುತ್ತಿರುವ ಬಗ್ಗೆ, ಅವರ ಸಂಬಂಧ ಅಥವಾ ಮದುವೆಯ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಫೆಬ್ರವರಿ 9 ರಂದು ನಿಶ್ಚಿತಾರ್ಥ ಮುಗಿದ ಬಳಿಕ ಸಾಹಿಲ್​, ನಿಕ್ಕಿಯನ್ನು ತನ್ನ ಉತ್ತಮ್ ನಗರದ ಫ್ಲಾಟ್‌ನಿಂದ ತನ್ನ ಕಾರಿನಲ್ಲಿ ಕೂರಿಸಿದ್ದನು. ನಂತರ ಇಬ್ಬರೂ ಗೋವಾಗೆ ಹೋಗಲು ಒಪ್ಪಿದರು. ಏಕೆಂದರೆ ನಿಕ್ಕಿ ಸಾಹಿಲ್‌ಗೆ ಗೋವಾಕ್ಕೆ ಹೋಗುವಂತೆ ಒತ್ತಡ ಹೇರುತ್ತಿದ್ದಳು. ಆಗ ನಿಕ್ಕಿಯ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗಿತ್ತು. ಸಾಹಿಲ್ ಟಿಕೆಟ್ ಬುಕ್​ ಮಾಡಲು ಆಗಲಿಲ್ಲ.

ಆ ಪ್ಲಾನ್ ಕೂಡಾ ಬದಲಾಯಿಸಿದ್ದರು: ಹೀಗಿರುವಾಗ ಪ್ಲಾನ್ ಬದಲಾಯಿಸಿ ಹಿಮಾಚಲಕ್ಕೆ ಹೋಗಲು ನಿರ್ಧರಿಸಿದರು. ಕಾರಿನಲ್ಲಿ ಪ್ರಯಾಣ ಆರಂಭಿಸಿ, ಆನಂದ್ ವಿಹಾರ್ ತಲುಪಿದ್ದರು. ಹಿಮಾಚಲಕ್ಕೆ ಬಸ್​​ನಲ್ಲಿ ತೆರಳುವ ಯೋಜನೆ ಇತ್ತು. ಅಲ್ಲಿಗೆ ಹೋದ ಮೇಲೆ ಹಿಮಾಚಲಕ್ಕೆ ಹೋಗುವ ಬಸ್ ಕಾಶ್ಮೀರ್ ಗೇಟ್ ಹತ್ತಿರದಲ್ಲಿ ಸಿಗುತ್ತದೆ ಎಂದು ತಿಳಿಯಿತು. ಬಳಿಕ ಅವರು ಕಾಶ್ಮೀರಿ ಗೇಟ್‌ಗೆ ಹೋದರು.

ಸಾಹಿಲ್‌ನ ಕುಟುಂಬದ ಸದಸ್ಯರಿಗೆ ಅವನ ಫೋನ್‌ಗೆ ನಿರಂತರವಾಗಿ ಕರೆಗಳು ಬರುತ್ತಿದ್ದವು. ಏಕೆಂದರೆ, ಸಾಹಿಲ್‌ನ ಮದುವೆ ಫೆಬ್ರವರಿ 10 ರಂದು ನಿಗದಿಯಾಗಿತ್ತು. ಸಾಹಿಲ್ ಹಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಉಳಿದಿದ್ದರು. ಅಂತಹ ಪರಿಸ್ಥಿತಿಯಲ್ಲಿ, ನಿಕ್ಕಿಗೆ ಈಗಾಗಲೇ ಸಾಹಿಲ್ ಮದುವೆಯ ಬಗ್ಗೆ ಸುಳಿವುಗಳ ದೊರೆತಿದ್ದವು. ಪದೇ ಪದೇ ಫೋನ್ ಮಾಡಿದ ನಂತರ, ನಿಕ್ಕಿ ಅನುಮಾನವು ಮತ್ತಷ್ಟು ಬಲವಾಯಿತು.

ನಿಕ್ಕಿ ಮತ್ತು ಸಾಹಿಲ್ ನಡುವೆ ವಾಗ್ವಾದ:ಈ ವಿಚಾರವಾಗಿ ನಿಕ್ಕಿ ಮತ್ತು ಸಾಹಿಲ್ ನಡುವೆ ವಾಗ್ವಾದ ನಡೆದಿದೆ. ನಂತರ ನಿಕ್ಕಿಯು ಸಾಹಿಲ್‌ಗೆ ಹೇಳಲು ಪ್ರಾರಂಭಿಸಿದ್ದಳು. ನಾವಿಬ್ಬರೂ ಒಟ್ಟಿಗೆ ಇರಲು ಸಾಧ್ಯವಾಗದಿದ್ದರೆ ನಾವು ಒಟ್ಟಿಗೆ ಸಾಯುತ್ತೇವೆ. ಆದರೆ, ಸಾಹಿಲ್ ಇದಕ್ಕೆ ಒಪ್ಪಲಿಲ್ಲ. ನಂತರ ನಿಕ್ಕಿಯು ಸಾಹಿಲ್ ಮತ್ತು ಅವನ ಕುಟುಂಬವನ್ನು ಸಂಪೂರ್ಣವಾಗಿ ಆರೋಪಿಸುವುದಾಗಿ ಬೆದರಿಕೆ ಹಾಕಿದಳು. ಈ ವೇಳೆ ಸಾಕಷ್ಟು ಚರ್ಚೆ ನಡೆದಿದೆ. ಆಗ ಸಾಹಿಲ್ ಕಾರಿನಲ್ಲಿದ್ದ ಮೊಬೈಲ್ ಚಾರ್ಜರ್​ನ ವೈರ್ ತೆಗೆದು ನಿಕ್ಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಹತ್ಯೆ ಬಳಿಕ ವಿಧಿವತ್ತಾಗಿ ಮದುವೆ:ನಿಕ್ಕಿಯನ್ನು ಕೊಂದ ಬಳಿಕ ಸಾಹಿಲ್ ತನ್ನ ಜಮೀನಿನಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲಿದ್ದ ಫ್ರಿಡ್ಜ್​ನಲ್ಲಿ ನಿಕ್ಕಿ ಮೃತದೇಹವನ್ನು ಇಟ್ಟು ತನ್ನ ಮನೆಗೆ ತೆರಳಿದ. ಮರುದಿನ ಅಂದರೆ ಫೆಬ್ರವರಿ 10 ರಂದು ವಿಧಿವತ್ತಾಗಿ ಮದುವೆಯಾಗಿದ್ದ. ನಂತರ ಈ ಕೊಲೆ ಪ್ರಕರಣ ಬಹಿರಂಗವಾಯಿತು.

ಪೊಲೀಸ್ ಮಾಹಿತಿ:ನಿಕ್ಕಿಯ ಕುಟುಂಬವು ಕರೋನಾ ನಂತರ ನಜಫ್ಗಢದಿಂದ ಜಜ್ಜರ್ಗೆ ಸ್ಥಳಾಂತರಗೊಂಡಿತು. ಉತ್ತಮ್ ನಗರ ಪ್ರದೇಶದಲ್ಲಿ ಕೋಚಿಂಗ್ ಸಮಯದಲ್ಲಿ ನಿಕ್ಕಿ ಮತ್ತು ಸಾಹಿಲ್ ನಡುವಿನ ಸ್ನೇಹವು ಪ್ರಾರಂಭವಾಯಿತು. ನಂತರ ಅವರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ಆ್ಯಪ್ ಬಳಸಿ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ.. ಪೊಲೀಸರಿಂದ ಕೋರ್ಟ್​​ ಶೋಧ

ABOUT THE AUTHOR

...view details