ಹೈದರಾಬಾದ್ : ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ದೇಶಾದ್ಯಂತ ಹಾಟ್ ಟಾಪಿಕ್ ಆಗಿದೆ. ಈ ನಡುವೆ ವಿಕ್ಕ್ಯಾಟ್ ವಿವಾಹ ಕುರಿತು ಅಭಿಮಾನಿಗಳು ಉತ್ಸುಕರಾಗಿದ್ದು, ಅದರಂತೆ ಕಾಂಡೋಮ್ ಬ್ರ್ಯಾಂಡ್ ಕಂಪನಿಯೊಂದು ಹಾಸ್ಯಾಸ್ಪದವಾಗಿ ಮೆಮ್ ಮಾಡಿದೆ.
ವಿಕ್ಕಿ ಮತ್ತು ಕತ್ರೀನಾ ಮದುವೆಯ ಬಗ್ಗೆ ಕಾಂಡೋಮ್ ಕಂಪನಿಯೊಂದು ಸಂದೇಶವನ್ನು ಹಂಚಿಕೊಂಡಿದ್ದು, 'ಆತ್ಮೀಯ ಕತ್ರಿನಾ ಮತ್ತು ವಿಕ್ಕಿ, ನಮ್ಮನ್ನು ಆಹ್ವಾನಿಸದಿದ್ದರೆ ನೀವು ' ನಗೆಪಾಟಲಿಗೆ ಈಡಾಗುತ್ತೀರಿ' ಎಂದು ಮೆಮ್ ಮಾಡಿ, ನಗೆ ಚಟಾಕಿ ಹಾರಿಸಿದೆ.
ವಿಕ್-ಕ್ಯಾಟ್ ಮದುವೆಗೆ ಮೆಮ್ ಪೋಸ್ಟ್ ಮಾಡಿದ 'ಕಾಂಡೋಮ್ ಕಂಪನಿ' ಹೈ-ಪ್ರೊಫೈಲ್ ಮದುವೆಯು ಕಳೆದ ಒಂದು ತಿಂಗಳಿನಿಂದ ಪಟ್ಟಣದ ಚರ್ಚೆಯಾಗಿದೆ. ಹೋಟೆಲ್‌ನಲ್ಲಿರುವ ಅತಿಥಿಗಳು ಮತ್ತು ಸಿಬ್ಬಂದಿ ಮದುವೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡದಂತೆ ತಡೆಯಲು ಸ್ಥಳದಲ್ಲಿ ಇಂಟರ್ನೆಟ್ ಜಾಮರ್‌ಗಳನ್ನು ಅಳವಡಿಸಲಾಗಿದೆ. ಆದ್ದರಿಂದ, ಇದುವರೆಗೂ ಸ್ಥಳದ ಒಳಗಿನ ಯಾವುದೇ ಫೋಟೋಗಳು ಇಂಟರ್ನೆಟ್‌ನಲ್ಲಿ ಬಂದಿಲ್ಲ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹ ಸಮಾರಂಭ ನಡೆಯುತ್ತಿದೆ. ಮೂಲಗಳ ಪ್ರಕಾರ, ಇಂದು ಮಧ್ಯಾಹ್ನ 3 ರಿಂದ 7:30 ರ ನಡುವೆ ರಾಜಮನೆತನದ ಸಂಪ್ರದಾಯದಂತೆ ವಿವಾಹ ವಿಧಿವಿಧಾನಗಳು ನಡೆಯಲಿವೆ ಎನ್ನಲಾಗ್ತಿದೆ.