ದುಮ್ಕಾ (ಜಾರ್ಖಂಡ್): ಅಭಿವೃದ್ಧಿ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಹೆಸರಲ್ಲಿ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತವೆ. ಆದರೆ, ನೆಲ ಮಟ್ಟದಲ್ಲಿ ಅದರ ವಾಸ್ತವವೇ ಬೇರೆಯೇ ಆಗಿರುತ್ತದೆ. ಇದನ್ನು ಗಮಸಿದಾಗ ಅಭಿವೃದ್ಧಿ ಎಲ್ಲಿ ಆಗಿದೆ, ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ. ಇದಕ್ಕೆ ಜಾರ್ಖಂಡ್‌ನ ಉಪ ರಾಜಧಾನಿ ಎಂದೇ ಕರೆಯಲಾಗುವ ದುಮ್ಕಾ ಜಿಲ್ಲೆ ಒಂದು ನಿರ್ದಶನ.
ಹೌದು, ದುಮ್ಕಾ ಘಟಾನುಘಟಿ ರಾಜಕಾರಣಿಗಳನ್ನು ಕಂಡಿರುವ ಜಿಲ್ಲೆ. ಇಲ್ಲಿನ ಜಾಮಾ ಬ್ಲಾಕ್‌ನ ಲಕ್‌ಜೋರಿಯಾ ಗ್ರಾಮದಲ್ಲಿ ರಸ್ತೆಯಾಗಲಿ, ಜನರಿಗೆ ವಸತಿ ಸೌಲಭ್ಯವಾಗಲಿ, ಸರಿಯಾದ ನೀರಿನ ವ್ಯವಸ್ಥೆಯಾಗಲಿ ಇಲ್ಲ. ಈ ಇಡೀ ಗ್ರಾಮವು ಬುಡಕಟ್ಟು ಜನಾಂಗದಿಂದ ಕೂಡಿದ್ದು, ಸುಮಾರು 200 ಕುಟುಂಬಗಳ 1,200 ಜನ ಸಂಖ್ಯೆ ಹೊಂದಿದೆ.
ಮೂಲಭೂತ ಸಮಸ್ಯೆಗಳ ಕೊರತೆಯಿಂದ ಮದುವೆಗೆ ಹಿಂದೇಟು: ಇದು ಘಟಾನುಘಟಿ ರಾಜಕಾರಣಿಗಳ ಕಂಡ ಜಿಲ್ಲೆಯ ಗ್ರಾಮದ ಕತೆ ಈ ಲಕ್‌ಜೋರಿಯಾ ಗ್ರಾಮವು ಜಾಮಾ ವಿಧಾನಸಭೆಯ ವ್ಯಾಪ್ತಿಯಲ್ಲಿ ಬರುತ್ತದೆ. ಜೆಎಂಎಂ ಮುಖ್ಯಸ್ಥ, ಮಾಜಿ ಸಿಎಂ ಶಿಬು ಸೊರೇನ್ ಅವರ ಸೊಸೆ ಸೀತಾ ಸೊರೇನ್ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಸತತ ಮೂರು ಬಾರಿ ಇಲ್ಲಿಂದ ಚುನಾವಣೆ ಗೆದ್ದು ಬಂದವರು ಸೀತಾ.
ಇನ್ನೂ ಇತಿಹಾಸಕ್ಕೆ ಹೋದರೆ ಶಿಬು ಸೊರೇನ್ ಪುತ್ರ ದುರ್ಗಾ ಸೊರೇನ್ ಕೂಡ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದು ಇದೇ ಕ್ಷೇತ್ರದಿಂದಲೇ. ಪ್ರಸ್ತುತ ಸುನಿಲ್ ಸೊರೇನ್ ದುಮ್ಕಾ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ. ಇದೇ ಭಾಗದಿಂದ ದೊಡ್ಡ ಮಟ್ಟದ ಜನಪ್ರತಿನಿಧಿಗಳು ಆಯ್ಕೆ ಹೋಗಿದ್ದಾರೆ. ಆದರೆ, ಈ ಲಕ್‌ಜೋರಿಯಾ ಗ್ರಾಮದ ಸಮಸ್ಯೆಯತ್ತ ಯಾರೂ ಗಮನ ಹರಿಸಿಲ್ಲ. ಸರ್ಕಾರದ ಅಧಿಕಾರಿಗಳಂತೂ ಇತ್ತ ಸುಳಿಯುವುದೇ ಇಲ್ಲ.
ಇಂದಿಗೂ ಗ್ರಾಮಕ್ಕೆ ರಸ್ತೆ ಇಲ್ಲ: ಲಕ್ಡಜೋರಿಯಾ ಗ್ರಾಮಕ್ಕೆ ಇಲ್ಲಿಯವರೆಗೆ ರಸ್ತೆ ನಿರ್ಮಾಣವಾಗಿಲ್ಲ. ಕೆಲವೆಡೆ 2 ಅಡಿ ಹಾಗೂ ಕೆಲವೆಡೆ 3 ಅಡಿಯ ಡಾಂಬರು ಕಾಣದ ರಸ್ತೆಗಳು ಇವೆ. ಅದರಲ್ಲಿಯೂ ಗುಂಡಿಗಳಿಂದಲೇ ರಸ್ತೆಗಳು ತುಂಬಿ ಹೋಗಿವೆ. ಹೀಗಾಗಿ ಗ್ರಾಮಕ್ಕೆ ಟ್ರ್ಯಾಕ್ಟರ್ ಕೂಡ ಬರಲು ಸಾಧ್ಯವಾಲ್ಲ. ಯಾರಾದರೂ ಅನಾರೋಗ್ಯಕ್ಕೆ ಒಳಗಾದಾಗ ರಸ್ತೆ ಸಮಸ್ಯೆಯಿಂದಾಗಿಯೇ ಆ್ಯಂಬುಲೆನ್ಸ್ ಗ್ರಾಮಕ್ಕೆ ಬರುವುದೇ ಇಲ್ಲ. ಹೀಗಾಗಿ ಮಂಚದಲ್ಲಿ ರೋಗಿಗಳನ್ನು ಹೊತ್ತು ಸಾಗಿಸಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಇಷ್ಟೇ ಅಲ್ಲ, ನೀರಿಗಾಗಿ ಜನ ಪರದಾಡಬೇಕಾಗಿದೆ. ಸರ್ಕಾರದ ಯೋಜನೆಗಳಿಗಾಗಿ ಸಾಕಷ್ಟು ಪ್ರಯತ್ನ ಪಟ್ಟರೂ ಸಿಕ್ಕಿಲ್ಲ. ಪ್ರಧಾನಮಂತ್ರಿ ಆವಾಸ್ ಸೇರಿ ಇತರ ಎಲ್ಲ ಸರ್ಕಾರಿ ವಸತಿ ಯೋಜನೆಯ ಪ್ರಯೋಜನಗಳಿಂದ ವಂಚಿತರಾಗಿದ್ದೇವೆ. ಇಲ್ಲಿಯವರೆಗೆ ಮನೆಗಳಿಗೂ ವಿದ್ಯುತ್ ಸಂಪರ್ಕ ಇಲ್ಲ. ಹೀಗಾಗಿ ಇತರ ಗ್ರಾಮದ ಜನರು ನಮ್ಮ ಮಕ್ಕಳನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. ಇಲ್ಲಿನ ಯುವಕರಿಗೆ ಮದುವೆ ಮಾಡುವುದು ತುಂಬಾ ಕಷ್ಟ ಎಂದು ಗ್ರಾಮದ ಹಿರಿಯರು ಹೇಳಿದ್ದಾರೆ.
ಇದನ್ನೂ ಓದಿ:ಸೋರುತಿಹುದು ಶಾಲೆ ಮಾಳಿಗೆ.. ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ! ವಿದ್ಯಾರ್ಥಿಗಳ ಗೋಳು ಕೇಳೊರ್ಯಾರು?