ಸಮಸ್ತಿಪುರ್(ಬಿಹಾರ):ನೌಕರಿಯಿಂದ ವಜಾ ಮಾಡಿದ್ದಕ್ಕಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಕಾಂಪೌಂಡರ್ವೋರ್ವ ವಿಭಿನ್ನವಾಗಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ಬಿಹಾರದ ಸಮಸ್ತಿಪುರ್ದಲ್ಲಿ ಈ ವಿಚಿತ್ರ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ ಸಮಿತ್ ಕುಮಾರ್ ಕಳೆದ ಕೆಲ ದಿನಗಳ ಹಿಂದೆ ವಜಾಗೊಂಡಿದ್ದನು. ಇದರಿಂದ ಕೋಪಗೊಂಡು ಮಹಿಳಾ ವೈದ್ಯೆಯ ಹಣೆಗೆ ಬಲವಂತವಾಗಿ ಕುಂಕುಮ(ಸಿಂಧೂರ) ಹಚ್ಚಿದ್ದಾನೆ. ತದನಂತರ ಸೆಲ್ಫಿ ತೆಗೆದುಕೊಂಡು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ವೈದ್ಯೆ-ಕಾಂಪೌಂಡರ್ ಮದುವೆಯಾಗಿದ್ದಾರೆಂದು ಅನೇಕರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಫೋಟೋದಲ್ಲಿ ಕಾಣಿಸಿಕೊಂಡಿರುವ ಮಹಿಳಾ ವೈದ್ಯೆ ಜಿಲ್ಲೆಯ ವೈದ್ಯಕೀಯ ಅಧಿಕಾರಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.