ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದ ಮೂರು ಜಿಲ್ಲೆಗಳಲ್ಲಿ ಸಂಡೇ ಲಾಕ್​​ಡೌನ್​ - ಕೊರೊನಾ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮಧ್ಯಪ್ರದೇಶದ ಭೋಪಾಲ್, ಇಂದೋರ್ ಮತ್ತು ಜಬಲ್ಪುರದಲ್ಲಿ ಪ್ರತಿ ಭಾನುವಾರ ಒಂದು ದಿನದ ಸಂಪೂರ್ಣ ಲಾಕ್​ಡೌನ್​ ಹೇರಲಾಗಿದೆ.

Complete Sunday lock down in 3 cities of MP
ಮಧ್ಯಪ್ರದೇಶದ ಮೂರು ಜಿಲ್ಲೆಗಳಲ್ಲಿ ಸಂಡೇ-ಒನ್​ ಡೇ ಲಾಕ್​​ಡೌನ್​

By

Published : Mar 21, 2021, 11:12 AM IST

ಭೋಪಾಲ್​ (ಮಧ್ಯಪ್ರದೇಶ): ದೇಶದ ಅನೇಕ ರಾಜ್ಯಗಳಲ್ಲಿ ಮತ್ತೆ ಕೊರೊನಾ ಅಬ್ಬರಿಸುತ್ತಿದೆ. ಮಧ್ಯಪ್ರದೇಶದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ.

ಮಧ್ಯಪ್ರದೇಶದ ಭೋಪಾಲ್, ಇಂದೋರ್ ಮತ್ತು ಜಬಲ್ಪುರದಲ್ಲಿ ಪ್ರತಿ ಭಾನುವಾರ ಒಂದು ದಿನದ ಸಂಪೂರ್ಣ ಲಾಕ್​ಡೌನ್​ ಹೇರಲಾಗಿದೆ. ಶನಿವಾರ ರಾತ್ರಿ 10 ರಿಂದಲೇ ಲಾಕ್​ಡೌನ್​ ಅವಧಿ ಆರಂಭವಾಗಲಿದ್ದು, ಸೋಮವಾರ ಬೆಳಗ್ಗೆ 6 ರವರೆಗೆ ಇರಲಿದೆ.

ಇದನ್ನೂ ಓದಿ: ನಿನ್ನೆ ಒಂದೇ ದಿನ 197 ಜನರು ಸಾವು, 43,846 ಹೊಸ ಕೇಸ್;​ 4.46 ಕೋಟಿ ಮಂದಿಗೆ ಲಸಿಕೆ

ಆಹಾರ, ವೈದ್ಯಕೀಯದಂತಹ ತುರ್ತು ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಬೆಳಗ್ಗೆ 10 ರವರೆಗೆ ಹಾಲು ಸರಬರಾಜು ಮಾಡಬಹುದು. ಅನಗತ್ಯವಾಗಿ ಮನೆಯಿಂದ ಹೊರಗೆ ಹೋದರೆ ಅವರನ್ನು ಬಂಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಅನೇಕ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

11 ದಿನ ಶಾಲಾ-ಕಾಲೇಜು ಬಂದ್​

ಇನ್ನು ಮಾರ್ಚ್ 20 ರಿಂದ ಮಾ. 31 ರವರೆಗೆ ಶಾಲಾ - ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಆದರೆ ಇಂದಿನ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗ (ಎಂಪಿಪಿಎಸ್​ಸಿ) ಪರೀಕ್ಷೆ ಬರೆಯುವವರಿಗೆ ಅವಕಾಶ ಮಾಡಿಕೊಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ.

ABOUT THE AUTHOR

...view details