ಅಹಮದಾಬಾದ್ (ಗುಜರಾತ್):ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ಮತ್ತು ಮುಕ್ತವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗದೊಂದಿಗೆ ಸಿ-ವಿಜಿಲ್ (cVIGIL) ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಮೂಲಕ, ಆನ್‌ಲೈನ್ ದೂರುಗಳನ್ನು ಚುನಾವಣಾ ಆಯೋಗವು ಪರಿಹರಿಸುತ್ತದೆ.
ರಾಜ್ಯಾದ್ಯಂತ ಚುನಾವಣೆ ಸಂಬಂಧ 900ಕ್ಕೂ ಹೆಚ್ಚು ದೂರುಗಳು ಬಂದಿದ್ದು, ತಕ್ಷಣವೇ ಪರಿಹರಿಸಲಾಗಿದೆ. ಪ್ರಸ್ತುತ, 611 ಫ್ಲೈಯಿಂಗ್ ಸ್ಕ್ವಾಡ್‌ಗಳು ಮತ್ತು 802 ರಾಜ್ಯ ಕಣ್ಗಾವಲು ತಂಡಗಳು ದೂರುಗಳನ್ನು ನಿಭಾಯಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿ ಪಿ ಭಾರತಿ ಮಾಹಿತಿ ನೀಡಿದ್ದು, ''ರಾಜ್ಯದಲ್ಲಿ ಚುನಾವಣೆಯ ಸಂದರ್ಭ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಾರ್ವಜನಿಕರು ದೂರು ನೀಡಲು ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಆರಂಭಿಸಲಾಗಿದ್ದು, ವಿಶೇಷ ತಂಡ ಹಾಗೂ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸ್ವೀಕರಿಸಿದ ದೂರುಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲಾಗುತ್ತದೆ. ಈಗಾಗಲೇ ಅಪ್ಲಿಕೇಶನ್ ಮೂಲಕ 900 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಸುಮಾರು 870 ದೂರುಗಳನ್ನು ಪರಿಹರಿಸಲಾಗಿದ್ದು, ಸುಮಾರು 200 ಕ್ಕೂ ಹೆಚ್ಚು ದೂರುಗಳು ನಿಜ ಎಂದು ಕಂಡುಬಂದಿಲ್ಲ ಎಂದು ಕೈಬಿಡಲಾಗಿದೆ. ಕಳೆದ ವಾರದಲ್ಲಿ 1,323 ದೂರುಗಳು ಬಂದಿವೆ. ಈ ಪೈಕಿ 1,172 ದೂರುಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.
ಆನ್‌ಲೈನ್ ದೂರುಗಳಿಗಾಗಿ ಭಾರತೀಯ ಚುನಾವಣಾ ಆಯೋಗವು ರಾಷ್ಟ್ರೀಯ ಕುಂದುಕೊರತೆ ಪರಿಹಾರ ವ್ಯವಸ್ಥೆಯ ಪೋರ್ಟಲ್ ಅನ್ನು ರಚಿಸಿದೆ. ನಾಗರಿಕರ ಅನುಕೂಲಕ್ಕಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಕಂಟ್ರೋಲ್ ರೂಮ್ ಫೋನ್ ಸಂಖ್ಯೆಗಳನ್ನು ಒದಗಿಸಲಾಗಿದೆ. ಈ ಮಾಧ್ಯಮದ ಮೂಲಕ ಇದುವರೆಗೆ 44 ದೂರುಗಳು ಬಂದಿದ್ದು, ಎಲ್ಲವನ್ನೂ ಪರಿಹರಿಸಲಾಗಿದೆ.
ಮಾಧ್ಯಮಗಳಿಂದ ಒಟ್ಟು 28 ದೂರುಗಳು ಬಂದಿವೆ. ಈ ಪೈಕಿ 17 ದೂರುಗಳನ್ನು ಪರಿಹರಿಸಲಾಗಿದೆ. ಹಣ ಹಂಚಿಕೆ, ಉಡುಗೊರೆ ಅಥವಾ ಕೂಪನ್ ವಿತರಣೆ, ಅನುಮತಿಯಿಲ್ಲದೆ ಪೋಸ್ಟರ್ ಅಥವಾ ಬ್ಯಾನರ್ ಬಳಕೆ, ಬೆದರಿಕೆ ಅಥವಾ ಶಸ್ತ್ರಾಸ್ತ್ರ ಬಳಕೆ, ನೀತಿ ಸಂಹಿತೆ ಉಲ್ಲಂಘನೆ, ಅಸ್ಪಷ್ಟ ಅಥವಾ ಪ್ರಚೋದನಕಾರಿ ಭಾಷಣ, ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆ ಮುಂತಾದ ದೂರುಗಳು ವರದಿಯಾಗಿವೆ.
ಇದನ್ನೂ ಓದಿ:ಗುಜರಾತ್ ವಿಧಾನಸಭೆ ಚುನಾವಣೆ: ಡಿ.1,5 ರಂದು ಮತದಾನ, 8 ರಂದು ಫಲಿತಾಂಶ