ರಾಯ್‌ಪುರ(ಛತ್ತೀಸ್ಗಢ):"ನೀನು ನಪುಂಸಕನಂತೆ ಕಾಣುತ್ತೀಯಾ" ಎಂದು ಪತಿ ಜರಿದಿದ್ದಾಗಿ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ವಿಚಿತ್ರ ಪ್ರಕರಣ ಛತ್ತೀಸ್ಗಢದಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ ತನಗೆ ಲಿಂಗ ಪರೀಕ್ಷೆ ಮಾಡಿಸಿ ಗರ್ಭಪಾತವನ್ನೂ ಮಾಡಿಸಲಾಗಿದೆ ಎಂದು ಮಹಿಳೆ ಕೇಸ್ ನೀಡಿದ್ದಾರೆ. ಪೊಲೀಸರು ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಏನಿದು ಪ್ರಕರಣ?:ರಾಜಧಾನಿ ರಾಯಪುರದ ನಿವಾಸಿಗಳಾದ ದಂಪತಿ ಮಧ್ಯೆ ಕಲಹ ಉಂಟಾಗಿದೆ. 2012 ರಲ್ಲಿ ವಿವಾಹವಾಗಿದ್ದು, ತನ್ನ ಗಂಡ ಆರಂಭದಿಂದಲೂ ತನ್ನನ್ನು ಸೇರುತ್ತಿಲ್ಲ. ದಿನವೂ ಅಶ್ಲೀಲವಾಗಿ ಟೀಕಿಸುತ್ತಾರೆ. ಇತರ ಮಹಿಳೆಯರೊಂದಿಗೆ ಸಂಬಂಧಿ ಬೆಳೆಸಿಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ನಪುಂಸಕನಂತಿರುವ ಮುಖ:ಪತಿ ತನ್ನ ಮುಖವನ್ನು ನಪುಂಸಕರಿಗೆ ಹೋಲಿಸುತ್ತಾನೆ. ನಿನ್ನ ಮುಖವನ್ನು ನೋಡಲಾಗದು. ತಂದೆಯ ಒತ್ತಾಯದ ಮೇರೆಗೆ ನಿನ್ನನ್ನು ಮದುವೆಯಾದೆ. ನೀನು ಹೆಣ್ಣೇ ಅಲ್ಲ ಎಂದು ಹೀಯಾಳಿಸುತ್ತಾರೆ. ನಮ್ಮಿಬ್ಬರಿಗೆ ಒಂದು ಮಗುವಿದೆ. ವರದಕ್ಷಿಣೆ ಹಣದಲ್ಲಿ ಮಜಾ ಮಾಡುತ್ತಿರುವ ತನ್ನ ಪತಿ, ಪರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ. ನಗ್ನವಾಗಿ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.